2017ರ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ : ವೀರೇಶ್‍ಗೆ ಅರಗಿಣಿ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Veeresh-n-01

ಬೆಂಗಳೂರು, ನ.28- ಈ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಆಂದೋಲನ ಪ್ರಶಸ್ತಿ, ಅಭಿಮಾನಿ ಸಮೂಹ ಸಂಸ್ಥೆಯ ಅರಗಿಣಿ ಪ್ರಶಸ್ತಿ ಹಾಗೂ ಪತ್ರಕರ್ತ ಕೆ.ಶಿವಕುಮಾರ್ ಅವರು ಸ್ಥಾಪಿಸಿರುವ ಮೂಕನಾಯಕ ಪ್ರಶಸ್ತಿಗಳಿಗೆ ರಾಜ್ಯಾದ್ಯಂತ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಪ್ರಶಸ್ತಿಗಳನ್ನು ಪುರಸ್ಕೃತರಿಗೆ ಪ್ರದಾನ ಮಾಡುವರು ಎಂದು ಹೇಳಿರುವ ಅವರು, ಅಭಿಮಾನಿ ಪ್ರಶಸ್ತಿ ಮತ್ತು ಮೈಸೂರು ದಿಗಂತ ಪ್ರಶಸ್ತಿಗಳನ್ನು ನಂತರ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಪ್ರಶಸ್ತಿ ಪುರಸ್ಕೃತರು: ಮಾಳಪ್ಪ ಅಡಸಾರೆ, ಡಿ.ಶಿವಲಿಂಗಪ್ಪ, ಚನ್ನಬಸವಣ್ಣ, ಶಿವಪ್ಪ ಮಡಿವಾಳ, ದತ್ತು ಸರ್ಕಿಲ್, ಸಾದಿಕ್ ಅಲಿ, ಸಿ.ಮಂಜುನಾಥ್, ಸಂಗಮೇಶ್ ಚೂರಿ, ಮಹೇಶ್ ಅಂಗಡಿ, ರಾಮು ವಗ್ಗಿ, ವಿಜಯ್‍ಕುಮಾರ್ ಪಾಟೀಲ್, ಬಾಲಕೃಷ್ಣ ರಾಮಚಂದ್ರ ವಿಭೂತೆ, ಉಗಮ ಶ್ರೀನಿವಾಸ್, ಗಣಪತಿ ಗಂಗೊಳ್ಳಿ, ಶಿವಕುಮಾರ್ ಕಣಸೋಗಿ, ಬಸವರಾಜ ದೊಡ್ಡಮನಿ, ರವಿ ಬಿದನೂರು, ಶ.ಮಂಜುನಾಥ್, ಎಚ್.ಎನ್.ಮಲ್ಲೇಶ್, ಮಹಮ್ಮದ್ ಯೂನಸ್, ಕೋನ ಮಂಜುನಾಥ್, ಕೆ.ಆರ್.ಮಂಜುನಾಥ್, ಬಾಳ ಜಗನ್ನಾಥಶೆಟ್ಟಿ. ಡಾ.ಯು.ಪಿ.ಶಿವಾನಂದ, ರಮೇಶ್ ಕುಟ್ಟಪ್ಪ, ಬಸವಣ್ಣ, ಶಿವಣ್ಣ, ಗೋವಿಂದ, ವಸಂತ್‍ಕುಮಾರ್, ಡಿ.ಎಸ್.ಶಿವರುದ್ರಪ್ಪ, ಜಯಕುಮಾರ್, ವೈ.ಎಸ್.ಎಲ್.ಸ್ವಾಮಿ, ಭಾಗ್ಯಶ್ರೀ, ಸೌಮ್ಯ ಅಜಿ, ಎಂ.ಸಿ.ಶೋಭಾ, ಬಿ.ಎನ್.ಶ್ರೀಧರ, ಸ್ಟಾಲಿನ್ ಪಿಂಟೊ, ಆದಿನಾರಾಯಣ, ಮುಮ್ತಾಜ್ ಅಲೀಂ, ಟಿ.ಅಶ್ವತ್ಥರಾಮಯ್ಯ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ತಳ ಸಮುದಾಯದ ಬಗೆಗಿನ ಬರಹಗಳ ಅಂಕಣಕಾರರಿಗೆ ನೀಡುವ ಮೂಕನಾಯಕ ಪ್ರಶಸ್ತಿಗೆ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ, ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿಗೆ ದಾವಣಗೆರೆಯ ನಗರವಾಣಿ ಪತ್ರಿಕೆ ಹಾಗೂ ಅತ್ಯುತ್ತಮ ಸಿನಿಮಾ ಪತ್ರಕರ್ತರಿಗೆ ನೀಡುವ ಅರಗಿಣಿ ಪ್ರಶಸ್ತಿಗೆ ಕೆ.ಎಂ.ವೀರೇಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

Facebook Comments

Sri Raghav

Admin