ತಾಯಿಯ ಅನಾರೋಗ್ಯದಿಂದ ನೊಂದ ಗರ್ಭಿಣಿ ಮಗಳು ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

dead-women

ಗೌರಿಬಿದನೂರು,ನ.29-ತಾಯಿಯ ಅನಾರೋಗ್ಯದಿಂದ ನೊಂದ ಮಗಳು (ಐದು ತಿಂಗಳ ಗರ್ಭಿಣಿ) ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಚ್ಚೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಪವಿತ್ರ(21) ಆತ್ಮಹತ್ಯೆಗೆ ಶರಣಾದ ಮಗಳು. ದೊಡ್ಡಬಳ್ಳಾಪುರ ಪಟ್ಟಣದ ನಿವಾಸಿ ಗಂಗಾರಾಜು-ಮಂಜುಳ ಎಂಬುವರ ಪುತ್ರಿ ಪವಿತ್ರಾಳನ್ನು ಎಂಟು ತಿಂಗಳ ಹಿಂದಷ್ಟೇ ಅಮೃತಹಳ್ಳಿಯ ವಿಜಯ್ ಎಂಬುವರೊಂದಿಗೆ ವಿವಾಹ ಮಾಡಿಕೊಡಲಾಗಿದ್ದು , ಇದೀಗ ಪವಿತ್ರ ಐದು ತಿಂಗಳ ಗರ್ಭಿಣಿಯಾಗಿದ್ದರು.

ಕಳೆದೆರಡು ತಿಂಗಳ ಹಿಂದೆ ಪವಿತ್ರಾಳ ತಾಯಿಗೆ ಹೃದಯ ಸಂಬಂಧ ಶಸ್ತ್ರ ಚಿಕಿತ್ಸೆಯಾಗಿದ್ದು , ವಿಶ್ರಾಂತಿಗಾಗಿ ಅವರು ತಮ್ಮ ತವರು ಮನೆಯಾದ ಡಿ.ಪಾಳ್ಯದಲ್ಲಿದ್ದರು. ಇತ್ತೀಚೆಗೆ ಮತ್ತೆ ಇವರ ತಾಯಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು , ರಕ್ತವಾಂತಿ ಮಾಡಿಕೊಂಡಿದ್ದರು. ಇದನ್ನು ಕಂಡ ಪವಿತ್ರ ತನ್ನ ತಾಯಿಯ ಮೇಲಿನ ಅತಿಯಾದ ಪ್ರೀತಿಯಿಂದ ತಾಯಿಯ ಬಗ್ಗೆಯೇ ಚಿಂತೆಗೀಡಾಗಿದ್ದಳು. ತಾಯಿಯ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡ ಪವಿತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮಂಚೇನಹಳ್ಳಿ ಠಾಣೆ ಎಎಸ್‍ಐ ಮಂಜುನಾಥ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin