ಭಾರತ ನಿರ್ಮಿತ ತೇಜಸ್ ಫೈಟರ್ ಜೆಟ್ ಸೂಪರ್ ಎಂದ ಸಿಂಗಪುರ್ ರಕ್ಷಣಾ ಸಚಿವ

ಈ ಸುದ್ದಿಯನ್ನು ಶೇರ್ ಮಾಡಿ

Tejas--02

ಮಿಡ್ನಾಪುರ್, ನ.29-ಭಾರತದ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಸಿಂಗಪುರ್ ರಕ್ಷಣಾ ಸಚಿವ ಎನ್‍ಜಿ ಎಂಗ್ ಹೆನ್ ಫೈಟರ್ ಜೆಟ್ ಸಾಮಥ್ರ್ಯವನ್ನು ಪ್ರಶಂಸಿಸಿದ್ದಾರೆ. ಭಾರತ ಮತ್ತು ಸಿಂಗಪುರ್ ಸೇನೆಗಳ ಜಂಟಿ ಅಭ್ಯಾಸದ ಹಿನ್ನೆಲೆಯಲ್ಲಿ ಪ್ರಸ್ತುತ ದೆಹಲಿಯಲ್ಲಿರುವ ಅವರು ನಿನ್ನೆ ಪಶ್ಚಿಮ ಬಂಗಾಳದ ಮಿಡ್ನಾಪುರ್‍ನ ಕಲೈಕುಂಡಾ ವಾಯು ನೆಲೆಗೆ ಭೇಟಿ ನೀಡಿದ್ದರು. ಅವರು ತೇಜಸ್ ಸಮರ ವಿಮಾನದಲ್ಲಿ ಉಪ ಏರ್ ಮಾರ್ಷಲ್ ಎ.ಪಿ.ಸಿಂಗ್ ಅವರೊಂದಿಗೆ ಅರ್ಧ ಗಂಟೆ ಕಾಲ ಹಾರಾಟ ನಡೆಸಿದರು. ಈ ಮೂಲಕ ಸ್ವದೇಶಿ ನಿರ್ಮಿತ ಫೈಟರ್ ಜೆಟ್‍ನಲ್ಲಿ ಮೊದಲ ಬಾರಿಗೆ ವಿದೇಶಿ ಅತಿಗಣ್ಯರೊಬ್ಬರು ಹಾರಾಡಿದಂತಾಗಿದೆ.

ನಂತರ ಮಾತನಾಡಿದ ಅವರು ತೇಜಸ್ ಅತ್ಯುತ್ತಮ ಯುದ್ಧ ವಿಮಾನವಾಗಿದ್ದು, ನಾನು ತುಂಬಾ ಇಂಪ್ರೆಸ್ ಆಗಿದ್ದೇನೆ ಎಂದು ಹೆನ್ ಹೊಗಳಿದ್ದಾರೆ.
ಇಂದು ದೆಹಲಿಯಲ್ಲಿ ನಡೆದ ಚಿಂತಕರ ಚಾವಡಿಯೊಂದರಲ್ಲಿ ಭಾಗವಹಿಸಿದ್ದ ಅವರು, ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗಾಗಿ ಭಾರತದೊಂದಿಗೆ ಅಗತ್ಯ ಸಹಕಾರ ನೀಡಲು ಸಿಂಗಪುರ್ ಸಿದ್ದ ಎಂದು ಹೇಳಿದರು. ನಿನ್ನೆ ಅವರು ಭಾರತದ ತಮ್ಮ ಸಹವರ್ತಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ರಕ್ಷಣಾ ಸಹಕಾರ ಕುರಿತು ಚರ್ಚಿಸಿದ್ದರು.

Facebook Comments

Sri Raghav

Admin