ಶಬನಾ ಅಜ್ಮಿಗೆ ಮಲೇಷ್ಯಾ ಪ್ರಧಾನಿ ಸನ್ಮಾನ

Shabana--02

ಮುಂಬೈ, ನ.29-ಹಿರಿಯ ಅಭಿನೇತ್ರಿ ಶಬನಾ ಅಜ್ಮಿ ಅವರನ್ನು ಕೌಲಾಲಂಪೂರ್‍ನಲ್ಲಿ ನಾಳೆ ನಡೆಯಲಿರುವ ವಾಣಿಜ್ಯ ಶೃಂಗಸಭೆಯಲ್ಲಿ ಮಲೇಷ್ಯಾ ಪ್ರಧಾನಮಂತ್ರಿ ನಜೀಬ್ ರಜಾಕ್ ಸನ್ಮಾನಿಸಲಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ 67 ವರ್ಷದ ಶಬನಾ, ತಮ್ಮನ್ನು ಗೌರವಿಸಲು ಮಲೇಷ್ಯಾ ಸರ್ಕಾರ ನಿರ್ಧರಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.  ದಿ ಎಕೊನಾಮಿಕ್ ಟೈಮ್ಸ್ ಏಷ್ಯನ್ ಬ್ಯುಸಿನೆಸ್ ಲೀಡರ್ಸ್ ಸಮಾವೇಶಕ್ಕಾಗಿ ನಾನು ಕೌಲಾಲಂಪೂರ್‍ನಲ್ಲಿದ್ದೇನೆ. ಅಲ್ಲಿ ಮಲೇಷ್ಯಾ ಪ್ರಧಾನಿ ನನ್ನನ್ನು ಸನ್ಮಾನಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Facebook Comments

Sri Raghav

Admin