ಸಲಿಂಗಿಗಳ ವಿವಾಹಕ್ಕೆ ಆಸ್ಟ್ರೇಲಿಯಾ ಸೆನೆಟ್ ಅಸ್ತು

ಈ ಸುದ್ದಿಯನ್ನು ಶೇರ್ ಮಾಡಿ

Sama-Sex--02

ಸಿಡ್ನಿ, ನ.29-ಸಲಿಂಗಿಗಳ ವಿವಾಹ ಮಸೂದೆಗೆ ಆಸ್ಟ್ರೇಲಿಯಾ ಸಂಸತ್ತಿನ ಮೇಲ್ಮನೆ ಇಂದು ಅನುಮೋದನೆ ನೀಡುವ ಮೂಲಕ ಹೊಸ ಸಂಪ್ರದಾಯಕ್ಕೆ ಚಾಲನೆ ನೀಡಿದೆ. ಈ ವಿಧೇಯಕಕ್ಕೆ ಸಂಸತ್ತಿನ ಕೆಳಮನೆಯಲ್ಲಿ ಅಂಗೀಕರಿಸುವ ಮೂಲಕ ಈ ಕಾನೂನು ಕ್ರಿಸ್ಮಸ್ ಹಬ್ಬದೊಳಗೆ ಜಾರಿಗೆ ಬರುವ ನಿರೀಕ್ಷೆ ಇದೆ. ಇತ್ತೀಚೆಗೆ ರಾಷ್ಟ್ರಾದ್ಯಂತ ನಡೆದ ಅಂಚೆ ಮತದಾನದಲ್ಲಿ ಸಲಿಂಗ ವಿವಾಹದ (ಮಹಿಳೆ ಮಹಿಳೆಯನ್ನು ಅಥವಾ ಪುರುಷ ಪುರುಷನನ್ನು ಮದುವೆಯಾಗುವಿಕೆ) ಪರ ಆಸ್ಟ್ರೇಲಿಯನ್ನರು ಒಲವು ತೋರಿದ್ದರು.

ಮಸೂದೆ ಅಂಗೀಕರಿಸುವ ಮೂಲಕ ಕಾನೂನು ಜಾರಿಗೊಳಿಸಲು ಬಹುತೇಕ ಸಂಸದರೂ ಒಪ್ಪಿದ್ದರು. ಆಸ್ಟ್ರೇಲಿಯಾ ಸೆನೆಟ್‍ನಲ್ಲಿ ಸಲಿಂಗಿಗಳ ವಿವಾಹಕ್ಕೆ ಸಮ್ಮತಿ ನೀಡುವ ಮೂಲಕ ಈ ಕಾನೂನಿಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಕನರ್ಸ್‍ವೇಟಿವ್ ಪಕ್ಷಕ್ಕೆ ಹಿನ್ನಡೆಯಾಗಿದೆ.

Facebook Comments

Sri Raghav

Admin