ಸಿಲಿಕಾನ್ ಸಿಟಿಯಲ್ಲಿ ‘ನಮ್ಮ ಟೈಗರ್’ ಕ್ಯಾಬ್ ಸೇವೆ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Devegowda--01

ಬೆಂಗಳೂರು, ನ.29- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ನಮ್ಮ ಟೈಗರ್ ಎಂಬ ಖಾಸಗಿ ಕ್ಯಾಬ್ ಸೇವೆ ಆರಂಭಗೊಂಡಿದೆ. ನಗರದ ಪುರಭವನದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಸಮ್ಮುಖದಲ್ಲಿ ನಮ್ಮ ಟೈಗರ್ ಕ್ಯಾಬ್ ಸೇವೆಗೆ ಚಾಲನೆ ನೀಡಲಾಯಿತು. ದಿನದ 24 ಗಂಟೆಗಳ ಕಾಲ ನಮ್ಮ ಟೈಗರ್ ಕ್ಯಾಬ್ ಸೇವೆ ಒದಗಿಸಲಿದ್ದು, ಯಾವುದೇ ಸೇವಾ ಶುಲ್ಕವಿಲ್ಲದೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಆರಂಭಗೊಂಡಿದೆ.

ಕ್ಯಾಬ್ ಚಾಲಕರಿಗೆ ಉಚಿತ ಆರೋಗ್ಯ ಸೇವೆ, ಅಪಘಾತ ಮತ್ತು ಜೀವವಿಮೆ, ಕಾರುಗಳ ನಿರ್ವಹಣಾ ಸೌಲಭ್ಯ ಒದಗಿಸಲಾಗಿದೆ. ನಮ್ಮ ಟೈಗರ್ ಎಂಬ ಆ್ಯಪ್ ಮೂಲಕ ಸೇವೆ ಆರಂಭಗೊಂಡಿದ್ದು, ಬೆಂಗಳೂರಿನಲ್ಲಿ ಸುಮಾರು 10 ಸಾವಿರ ಕ್ಯಾಬ್ ಸೇವೆ ಆರಂಭಗೊಳ್ಳುವ ಸಾಧ್ಯತೆಗಳಿವೆ. ಈ ಕ್ಯಾಬ್ ಸೇವೆಯನ್ನು ಮೈಸೂರು, ಬೆಳಗಾವಿ, ಹುಬ್ಬಳ್ಳಿ ಹಾಗೂ ಮಂಗಳೂರಿಗೂ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.

Facebook Comments

Sri Raghav

Admin