ಗರ್ಭಧರಿಸಿದ 6 ವರ್ಷದ ಬಾಲಕ, ವೈದ್ಯಲೋಕಕ್ಕೆ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

6-Year-Old-02

ವಾರಣಾಸಿ, ನ.30-ಇದೊಂದು ನಂಬಲಾಗದ ಮತ್ತು ಅಚ್ಚರಿಯ ಸುದ್ದಿ. ವೈದ್ಯಲೋಕದ ವಿಸ್ಮಯ ಎನ್ನಲೂಬಹುದು. 6 ವರ್ಷದ ಬಾಲಕನೊಬ್ಬ ಗರ್ಭಿಣಿಯಾಗಿದ್ದಾನೆ ಎಂಬ ಸಮಾಚಾರ ಈಗ ವೈದ್ಯಕೀಯ ಕ್ಷೇತ್ರದಲ್ಲಿ ಬಹು ಚರ್ಚಿ ವಿಷಯವಾಗಿದೆ. ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದ ಕುತೂಹಲಕಾರಿ ಘಟನೆ ಇದು. ಕಳೆದ ಕೆಲವು ದಿನಗಳಿಂದ ರಮೇಶ್(ಹೆಸರು ಬದಲಾಯಿಸಲಾಗಿದೆ) ಎಂಬ ಬಾಲಕನಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಆಹಾರ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ.

ಆತನ ಪೋಷಕರು ಕೆಲವು ವೈದ್ಯರ ಬಳಿ ಬಾಲಕನನ್ನು ತಪಾಸಣೆಗೆ ಒಳಪಡಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಭಾಲಕನ ಸಮಸ್ಯೆ ಬಗೆಹರಿಯದಿದ್ದಾಗ. ರಮೇಶ್‍ನನ್ನು ಪ್ರೈವೇಟ್ ಹಾಸ್ಪಿಟಲ್‍ನಲ್ಲಿ ಪರಿಶೀಲಿಸಿದಾಗ ಆತನ ಹೊಟ್ಟೆಯಲ್ಲಿ ಗಡ್ಡೆ ಇರುವುದು ಪತ್ತೆಯಾಯಿತು. ಉದರ ಗಂಟನ್ನು ತೆಗೆದು ಹಾಕಲು ಶಸ್ತ್ರಚಿಕಿತ್ಸೆ ನಡೆಸಿದ ತಜ್ಞ ವೈದ್ಯರಿಗೆ ಅಚ್ಚರಿ ಕಾದಿತ್ತು. ಆದು ಗಡ್ಡೆಯಾಗಿರಲಿಲ್ಲ, ಬೆಳವಣಿಗೆಯಾಗದ ಭ್ರೂಣವಾಗಿತ್ತು…! ಎರಡು ಗಂಟೆಗಳ ದೀರ್ಘ ಶಸ್ತ್ರಕ್ರಿಯೆ ನಂತರ ಅದನ್ನು ವೈದರು ತೆಗೆದುಹಾಕಿದರು.

ವೈದ್ಯರು ನಂಬಿರುವಂತೆ ಇದು 5 ಲಕ್ಷ ಮಕ್ಕಳಲ್ಲಿ ಒಬ್ಬರಲ್ಲಿ ಮಾತ್ರ ಕಂಡುಬರುವ ಅತ್ಯಂತ ವಿರಳಾತಿ ವಿರಳ ಪ್ರಕರಣ. ಇದನ್ನು ಟುರೋ ಥೀರಿ ಎನ್ನುವರು. ಇಂಥ ಅತಿ ಅಪರೂಪದ ಪ್ರಕರಣದಲ್ಲಿ ಈ ಹಿಂದೆ ತಾಯಿಯ ಗರ್ಭದಲ್ಲಿ ಅಭಿವೃದ್ದಿಯಾಗದಿದ್ದ ಭ್ರೂಣ ಮಗುವಿನ ಉದರಕ್ಕೆ ಸೇರುತ್ತದೆ ಹಾಗೂ ನಿಧಾನವಾಗಿ ಅಭಿವೃದ್ಧಿಯಾಗುತ್ತದೆ. ಭಾರತದಲ್ಲಿ ಈವರೆಗೆ ಇಂಥ 9 ಪ್ರಕರಣಗಳು ಮಾತ್ರ. ಪತ್ತೆಯಾಗಿದ್ದರೂ ಇಷ್ಟು ದೊಡ್ಡದಾಗಿ ಬೆಳೆದ ಪ್ರಥಮ ಸಂಗತಿ ಇದಾಗಿದೆ ಎಂದು ವೈದ್ಯರು ಹೇಳಿದ್ದಾರೆ.

Facebook Comments

Sri Raghav

Admin