ಜಾವಾ ದ್ವೀಪಕ್ಕೆ ಅಪ್ಪಳಿಸಿದ ವಿನಾಶಕಾರಿ ಚಂಡಮಾರುತ, 24 ಸಾವು, ಹಲವರು ಕಣ್ಮರೆ

Java--02

ಜಕಾರ್ತ, ನ.3-ಇಂಡೋನೆಷ್ಯಾದ ಜಾವಾ ದ್ವೀಪಕ್ಕೆ ಅಪ್ಪಳಿಸಿದ ವಿನಾಶಕಾರಿ ಚಂಡಮಾರುತ ಮತ್ತು ಭೂಕುಸಿತದಿಂದ 24 ಮಂದಿ ಮೃತಪಟ್ಟು, ಅನೇಕರು ಕಣ್ಮರೆಯಾಗಿದ್ದಾರೆ. ಭಾರೀ ಬಿರುಗಾಳಿಯಿಂದ ಕೂಡಿದ ಮಳೆಯಿಂದ ಈ ದ್ವೀಪದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಭೂಕುಸಿತಗಳೂ ಸಂಭವಿಸಿವೆ. ಈ ನೈಸರ್ಗಿಕ ದುರಂತದಲ್ಲಿ 24ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದು, ಸಾವಿರಾರು ಮನೆಗಳು ಜಲಾವೃತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹ ಮತ್ತು ಭೂಕುಸಿತದಿಂದ ನಾಪತ್ತೆಯಾಗಿರುವ ಹಲವು ಮಂದಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣೆ ಸಂಸ್ಥೆಯ ವಕ್ತಾರರೊಬ್ಬರು ತಿಳಿಸಿದ್ದಾರೆ. ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಅಂಗ್‍ಮೌಂಟ್ ಅಗ್ನಿ ಪರ್ವತ ಬಾಯ್ತೆರೆದು ಬೋರ್ಗರೆಯುತ್ತಿರುವಾಗಲೇ ಇತ್ತ ಜಾವಾ ದ್ವೀಪದಲ್ಲಿ ಭೀಕರ ಚಂಡಮಾರುತ ಅಪ್ಪಳಿಸಿದೆ.

Facebook Comments

Sri Raghav

Admin