ತೆರೆ ಮೇಲೆ ‘ಡ್ರೀಮ್ ಗರ್ಲ್’ ನ ಕನಸು ಶುರು

ಈ ಸುದ್ದಿಯನ್ನು ಶೇರ್ ಮಾಡಿ

dream

ಚಂದನವನದಲ್ಲಿ ಹಲವಾರು ವಿಭಿನ್ನ ಬಗೆಯ ಚಿತ್ರಗಳು ಸಾಲು ಸಾಲಾಗಿ ಬರುತ್ತಿವೆ. ಅದರಲ್ಲಿ ಕೆಲವು ಚಿತ್ರಗಳು ಶೀರ್ಷಿಕೆಯಿಂದಲೇ ಪ್ರಚಾರದ ಭರಾಟೆಯನ್ನು ಪಡೆದುಕೊಂಡು ಪ್ರೇಕ್ಷನನ್ನು ಚಿತ್ರಮಂದಿರದತ್ತ ಸೆಳೆಯುತ್ತವೆ. ಆ ನಿಟ್ಟಿನಲ್ಲಿ ಬಂದಂತಹ ಒಂದಷ್ಟು ಚಿತ್ರಗಳು ಪ್ರೇಕ್ಷಕರ ಮನಸ್ಸನ್ನು ಸೆಳೆದಿವೆ ಆ ನಿಟ್ಟಿನಲ್ಲಿ ಗಮನ ಸೆಳೆದಿದೆ ಈ ಶಿರ್ಷಿಕೆ. ಸುಮಾರು 70ರ ದಶಕದಲ್ಲಿ ಬಾಲಿವುಡ್‍ನಲ್ಲಿ ಹೇಮಾಮಾಲಿನಿ ಸಿನಿ ರಸಿಕರ ಪಾಲಿಗೆ ಡ್ರೀಮ್‍ಗರ್ಲ್ ಆಗಿದ್ದರು. ಈಗ 2017ರಲ್ಲಿ ಸ್ಯಾಂಡಲ್‍ವುಡ್‍ಗೂ ಒಬ್ಬ ಡ್ರೀಮ್ ಗರ್ಲ್ ಆಗಮಿಸಿದ್ದಾಳೆ. ಹೌದು, ಅದೇ ಹೆಸರಿನ ಚಿತ್ರವೊಂದು ಕನ್ನಡದಲ್ಲಿ ನಿರ್ಮಾಣವಾಗಿದ್ದು ಈ ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಒಬ್ಬ ಶ್ರೀಮಂತ ಹುಡುಗಿ ಹಾಗೂ ಬಡ ಹುಡುಗನ ಪ್ರೀತಿಗೆ ಆಕೆಯ ತಂದೆ ವಿರೋಧ ವ್ಯಕ್ತಪಡಿಸಿದಾಗ ಮುಂದಾಗುವ ಘಟನೆಗಳೇ ಡ್ರೀಮ್ ಗರ್ಲ್ ಚಿತ್ರದ ಕಥಾಹಂದರ. ಬರಹಗಾರ ಲಕ್ಷ್ಮಣ್ ನಾಯಕ್ ಅವರ ರಚನೆಯ ಜೀವನ ಸಾಥಿ ಎಂಬ ಕಾದಂಬರಿ ಆಧಾರಿತ ಕನ್ನಡ ಚಿತ್ರ ಇದಾಗಿದ್ದು, ನಟಿ ಅಮೃತ ರಾವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ವಿಭಿನ್ನ ಪ್ರೇಮ ಕಥೆಯಾಗಿದ್ದು, ಆಗರ್ಭ ಶ್ರೀಮಂತ ತಂದೆ ತನ್ನ ಮಗಳನ್ನು ಮುದ್ದಾಗಿ ಸಾಕಿರುತ್ತಾನೆ. ಅವಳು ಒಬ್ಬ ಬಡ ಹುಡುಗನನ್ನು ಪ್ರೇಮಿಸಿದಾಗ ಅವರಿಬ್ಬರನ್ನು ದೂರಮಾಡಲು ನಾಯಕಿಯ ತಂದೆ ಏನೆಲ್ಲಾ ಕುತಂತ್ರಗಳನ್ನು ರೂಪಿಸುತ್ತಾನೆ ಎನ್ನುವುದೇ ಈ ಚಿತ್ರದ ಮುಖ್ಯ ಕಥಾನಕ. ಎಸ್‍ಜಿಎಲ್ ಪೆÇ್ರಡಕ್ಷನ್ ಅಡಿಯಲ್ಲಿ ಮೂಲ ಕಥೆಗಾರ ಲಕ್ಷ್ಮಣ್ ನಾಯಕ್ ಅವರೇ ಈ ಚಿತ್ರದ ಚಿತ್ರಕಥೆ ರಚಿಸಿ ನಿರ್ದೇಶನ ಮಾಡುವುದರೊಂದಿಗೆ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಸಹ ನಿಭಾಯಿಸಿದ್ದಾರೆ.
ವಿ.ಮನೋಹರ್ ಅವರ ಸಂಗೀತ ಈ ಚಿತ್ರಕ್ಕಿದ್ದು, ಗಂಧರ್ವ ಹಿನ್ನೆಲೆ ಸಂಗೀತ ಒದಗಿಸಿ ಎರಡು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಚಿತ್ರದಲ್ಲಿ ಡ್ರೀಮ್ ಗರ್ಲ್ ಪಾತ್ರ ವನ್ನು ನಟಿ ಅಮೃತಾ ರಾವ್ ನಿರ್ವಹಿಸಿದ್ದಾರೆ. ಇವರ ಜೊತೆಗೆ ಪಟ್ರೆ ಅಜಿತ್, ರಘು ಭಟ್, ದೀಪಿಕಾ ದಾಸ್, ತಿಮ್ಮೇಗೌಡ, ಅಪೂರ್ವ, ಮಹೇಂದ್ರ ಮುನೋತ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ. ಈ ಚಿತ್ರವು ಒಂದು ವಿಭಿನ್ನ ಪ್ರೇಮಕಥಾ ಹಂದರ ಒಳಗೊಂಡಿದ್ದು, ರಾಜ್ಯಾದ್ಯಂತ ಸುಮಾರು 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುತ್ತಿದೆ. ಈ ಚಿತ್ರದ ವಿತರಣೆಯನ್ನು ವೆಂಕಟ್‍ಗೌಡ ವಹಿಸಿಕೊಂಡಿದ್ದು, ಅದ್ಧೂರಿ ಪ್ರಚಾರದೊಂದಿಗೆ ಡ್ರೀಮ್‍ಗರ್ಲ್ ಬೆಳ್ಳಿ ಪರದೆ ಮೇಲೆ ಬರುತ್ತಿದ್ದಾಳೆ.

Facebook Comments