ನಾಳೆಯಿಂದ ಥೀಯೇಟರ್ ಗಳಲ್ಲಿ ಮಫ್ತಿ ಹವಾ

ಈ ಸುದ್ದಿಯನ್ನು ಶೇರ್ ಮಾಡಿ

mafti

ಸ್ಯಾಂಡಲ್‍ವುಡ್‍ನಲ್ಲಿ ಈ ವಾರ ಭಾರೀ ಸದ್ದು ಮಾಡಲು ಹೊರಟಿರುವ ಚಿತ್ರ ಮಫ್ತಿ. ಈ ಚಿತ್ರದ ಬಗ್ಗೆ ಈಗಾಗಲೇ ಬಹಳಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರಳಿ ಇಬ್ಬರೂ ಒಟ್ಟಿಗೆ ಅಭಿನಯಿಸಿರುವ ಅದ್ಧೂರಿ ಚಿತ್ರ ಈ ವಾರ ರಾಜ್ಯಾದ್ಯಂತ ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಾರಾಜಿಸಲಿದೆ. ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸಿರುವ ಈ ಚಿತ್ರವು ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಶಿವಣ್ಣ ಬಹಳ ದಿನಗಳ ನಂತರ ಭೂಗತ ಲೋಕದ ದೊರೆಯಾಗಿ ಕಾಣಿಸಿಕೊಂಡಿದ್ದಾರಂತೆ. ಅಲ್ಲದೆ, ನಟ ಶ್ರೀಮುರಳಿ ಒಂದು ವಿಶೇಷ ಪಾತ್ರದಲ್ಲಿ ಎಲ್ಲರ ಗಮನ ಸೆಳೆಯಲಿದ್ದಾರೆ ಎಂಬ ಮಾತು ಚಿತ್ರತಂಡದಿಂದ ಕೇಳಿಬರುತ್ತಿದೆ. ವಸಿಷ್ಟ ಸಿಂಹ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ.

ಯವ ನಿರ್ದೇಶಕ ನರ್ತನ್ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ಇನ್ನು ಈ ಚಿತ್ರಕ್ಕೆ ಉಗ್ರಂ ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ನವೀನ್‍ಕುಮಾರ್ ಅವರ ಛಾಯಾಗ್ರಹಣ, ಹರೀಶ್ ಕೊಮ್ಮೆ ಅವರ ಸಂಕಲನ, ರವಿವರ್ಮ, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನವಿದೆ. ಈ ಚಿತ್ರದ ಹಾಡುಗಳನ್ನು ಸಾಯಿಸರ್ವೇಶ್, ಕೆ.ಕಲ್ಯಾಣ್ ಹಾಗೂ ನರ್ತನ್ ರಚಿಸಿದ್ದಾರೆ. ಕೆ.ಶ್ರೀರಾಮ್ ಲಕ್ಷ್ಮಣ್ ಈ ಚಿತ್ರಕ್ಕೆ ಸಂಭಾಷಣೆ ಬರೆಯುವುದರೊಂದಿಗೆ ಸಹಕಾರ ನಿರ್ದೇಶನ ಮಾಡಿದ್ದಾರೆ. ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‍ಕುಮಾರ್, ಶ್ರೀಮುರಳಿ, ಶಾನ್ವಿ ಶ್ರೀವಾಸ್ತವ್, ದೇವರಾಜ್, ಛಾಯಾಸಿಂಗ್, ಪ್ರಕಾಶ್ ಬೆಳವಾಡಿ, ವಸಿಷ್ಠಸಿಂಹ, ಸಾಧುಕೋಕಿಲ, ಚಿಕ್ಕಣ್ಣ, ಮಧುಗುರುಸ್ವಾಮಿ ಮುಂತಾದವರು ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದ ಟ್ರೈಲರ್ ಸಾಮಾಜಿಕ ಜಾಲತಾಣ ಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದು ಕೊಂಡಿದೆ. ಬಹಳಷ್ಟು ನಿರೀಕ್ಷೆ ಯೊಂದಿಗೆ ಬಿಡು ಗಡೆಗೊಳ್ಳುತ್ತಿರುವ ಈ ಚಿತ್ರವನ್ನು ನೋಡಲು ಶಿವಣ್ಣನ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ಚಿತ್ರವು ಮತ್ತೊಂದು ಮೈಲುಗಲ್ಲಾಗಲಿದೆ ಎಂಬ ನಿರೀಕ್ಷೆಯನ್ನು ಚಿತ್ರತಂಡ ಹೊಂದಿದೆ. ಅದರಂತೆ ಅದ್ಧೂರಿ ಪ್ರಚಾರದೊಂದಿಗೆ ಬೆಳ್ಳಿ ಪರದೆ ಮೇಲೆ ಮಫ್ತಿಯನ್ನು ಕರೆತರು ತ್ತಿದ್ದಾರೆ.

Facebook Comments

Sri Raghav

Admin