ಕಾಮಾಕ್ಷಿಪಾಳ್ಯದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಐವರ ಸೆರೆ, 3 ಯುವತಿಯರ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Prostitution-01

ಬೆಂಗಳೂರು, ನ.30-ನಗರದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ವಸತಿಗೃಹವೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿ, ಹೊರ ರಾಜ್ಯದ ತರುಣಿಯರೂ ಸೇರಿದಂತೆ ಮೂವರು ಯುವತಿಯರನ್ನು ರಕ್ಷಿಸಿದ್ದಾರೆ. ನಾಗರಬಾವಿಯ ಅಶೋಕ್ ಕೆ.ಟಿ, ಮಂಡ್ಯ ಜಿಲ್ಲೆಯ ಶಿವಕುಮಾರ್, ತುಮಕೂರಿನ ಶ್ರೀಧರ್, ಮಂಡ್ಯದ ಅಭಿಷೇಕ್ ಹಾಗೂ ಶ್ರೀನಗರದ ನವೀನ್ ಬಿ.ಎನ್. ಬಂಧಿತರು. ಆರೋಪಿಗಳಿಂದ ನಗದು, ಮೊಬೈಲ್ ಫೋನ್‍ಗಳು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯ ಸರಹದ್ದಿನ ಲಾಡ್ಜ್ ಒಂದರಲ್ಲಿ ಹೊರ ರಾಜ್ಯದ ಮತ್ತು ಸ್ಥಳೀಯ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ವಸತಿ ನಿಲಯದ ಮೇಲೆ ದಾಳಿ ಮಾಡಿದರು. ದಾಳಿ ವೇಳೆ ಐವರು ಆರೋಪಿಗಳನ್ನು ಬಂಧಿಸಿ, ಮೂವರು ಯುವತಿಯರನ್ನು ಈ ಅಕ್ರಮ ಜಾಲದಿಂದ ರಕ್ಷಿಸಲಾಗಿದೆ. ಹೊರ ರಾಜ್ಯದಿಂದ ಯುವತಿಯರನ್ನು ಮಾನವ ಕಳ್ಳಸಾಗಣೆ ಮೂಲಕ ಇಲ್ಲಿಗೆ ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದುದಾಗಿ ಈ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ಧಾರೆ. ಈ ದಂಧೆಯಲ್ಲಿ ತೊಡಗಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.

Facebook Comments

Sri Raghav

Admin