ಮಣಿಪಾಲ್, ಕೆಎಲ್‍ಇ ಸೇರಿದಂತೆ 29 ವಿವಿಗಳಿಗೆ ಯುಜಿಸಿ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

UGC--02

ನವದೆಹಲಿ, ನ.29-ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಮಣಿಪಾಲ(ದಕ್ಷಿಣ ಕನ್ನಡ) ಕೆಎಲ್‍ಇ(ಬೆಳಗಾವಿ), ಕ್ರೈಸ್ಟ್, ಜೈನ್ ವಿವಿಗಳೂ(ಬೆಂಗಳೂರು) ಸೇರಿದಂತೆ 29 ವಿಶ್ವವಿದ್ಯಾಲಯಗಳಿಗೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯೂನಿವರ್ಸಿಟಿ ಗ್ರಾಂಟ್ ಕಮಿಷನ್-ಯುಜಿಸಿ) ನೋಟಿಸ್ ಜಾರಿಗೊಳಿಸಿದ್ದು, ತಮ್ಮ ಸಂಸ್ಥೆಗಳ ಹೆಸರಿನಿಂದ ವಿಶ್ವವಿದ್ಯಾಲಯ ಎಂಬ ಪದವನ್ನು ತೆಗೆದು ಹಾಕುವಂತೆ ಸೂಚಿಸಿದೆ. ಈ ಸೂಚನೆಯನ್ನು ಪಾಲಿಸದಿದ್ದರೆ, ಸ್ವಾಯತ್ತವಾಗಲಿರುವ ಸಂಸ್ಥೆಗಳು (ಅಟೋನಮಸ್ ಬಾಡಿ) ಎಂಬ ಸ್ಥಾನಮಾನವನ್ನು ತೆಗೆದು ಹಾಕುವುದಾಗಿ ಎಚ್ಚರಿಕೆ ನೀಡಿದೆ.

ಸ್ವಾಯತ್ತವಾಗಲಿರುವ ವಿಶ್ವವಿದ್ಯಾಲಯಗಳ ಸ್ಥಾನಮಾನ ಹೊಂದಿರುವ ಶಿಕ್ಷಣ ಸಂಸ್ಥೆಗಳು ವಿವಿ ಎಂಬ ಪದ ಬಳಸುವುದಕ್ಕೆ ನ.3ರಂದು ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಯುಜಿಸಿ ನೋಟಿಸ್‍ಗಳನ್ನು ಜಾರಿಗೊಳಿಸಿದೆ. ಸುಪ್ರೀಂಕೋರ್ಟ್ ಆದೇಶದ ಬಳಿಕ 123 ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ಎರಡು ಬಾರಿ ಪತ್ರಗಳನ್ನು ಬರೆದು 15 ದಿನಗಳ ಒಳಗಾಗಿ ಇದಕ್ಕೆ ಬದ್ದವಾಗುವಂತೆ ಹಾಗೂ ಸರ್ಕಾರದ ಅಧಿಸೂಚನೆಯಲ್ಲಿರುವ ಹೆಸರನ್ನೇ ಬಳಸಬೇಕು ಎಂದು ತಿಳಿಸಿತ್ತು. ಆದರೆ 29 ಸಂಸ್ಥೆಗಳು ಸ್ಪಂದಿಸದ ಕಾರಣ ನೋಟಿಸ್ ಜಾರಿಗೊಳಿಸಲಾಗಿದೆ.

Facebook Comments

Sri Raghav

Admin