ಸಿದ್ಧಾರೂಢ ಮಠದಲ್ಲಿ ಬಾಲಿವುಡ್ ನಟಿ ಕಾಜೋಲ್ ಸ್ಪೆಷಲ್ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ನ.30- ಸದಾ ಶರಣರು, ಭಕ್ತರ ತಾಣವಾಗಿದ್ದ ಹುಬ್ಬಳ್ಳಿಯ ಸಿದ್ಧಾರೂಢ ಮಠ ಇಂದು ಸೆಲಬ್ರಿಟಿಗಳ ಆಗಮನದಿಂದ ಜನಜಂಗುಳಿಯಿಂದ ಕೂಡಿತ್ತು. ಸಿದ್ಧಾರೂಢ ಮಠಕ್ಕೆ ಬಾಲಿವುಡ್ ನಟಿ ಕಾಜೋಲ್ ಹಾಗೂ ಅವರ ಕುಟುಂಬದ ಸದಸ್ಯರು ಭೇಟಿ ನೀಡಿ ಸಿದ್ಧಾರೂಢ ಸ್ವಾಮೀಜಿಯವರ ಗದ್ದುಗೆಯ ದರ್ಶನ ಪಡೆದು ಪೂಜೆ ಮಾಡಿದ್ದು ವಿಶೇಷವಾಗಿತ್ತು.

ತಾಯಿ ತನುಜಾ ಮುಖರ್ಜಿ, ತಂಗಿ ತನೀಷಾ, ಮಗ ಯೋಗಿ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿದ ನಟಿ ಕಾಜೋಲ್ ಸಿದ್ಧಾರೂಢ ಶ್ರೀಗಳ ಗದ್ದುಗೆಗೆ ವಿಶೇಷ ಅಭಿಷೇಕ ಮಾಡಿಸಿದರು. ಸಿದ್ಧಾರೂಢ ಸ್ವಾಮಿಗಳ ಗದ್ದುಗೆ ಪೂಜೆ ಬಳಿಕ ನಟಿ ಕಾಜೋಲ್ ಕೆಲಕಾಲ ಕುಳಿತು ಧ್ಯಾನ ಮಾಡಿದರು. ಸಿದ್ಧಾರೂಢ ಮಠದ ದರ್ಶನಕ್ಕಾಗಿ ವಿಶೇಷ ವಿಮಾನದಲ್ಲಿ ಕಾಜೋಲ್ ಕುಟುಂಬದ ಸದಸ್ಯರು ಆಗಮಿಸಿದ್ದರು. ಬಾಲ್ಯದಿಂದಲೂ ಕಾಜೋಲ್ ಕುಟುಂಬ ಸಿದ್ಧಾರೂಢ ಸ್ವಾಮೀಜಿಯವರ ಭಕ್ತರಾಗಿದ್ದಾರೆ.  ಪ್ರತಿದಿನ ಮಠಕ್ಕೆ ಆಗಮಿಸುವ ಭಕ್ತರು ಇಂದು ನಟಿ ಕಾಜೋಲ್ ಬರುತ್ತಿದ್ದಾರೆ ಎಂದು ತಿಳಿದು ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

Facebook Comments

Sri Raghav

Admin