2 ದಶಕಗಳ ಬಳಿಕ ವಿಶ್ವ ವೇಟ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್’ನಲ್ಲಿ ಮೀರಾ ‘ಚಿನ್ನ’ದ ಸಾಧನೆ

ಈ ಸುದ್ದಿಯನ್ನು ಶೇರ್ ಮಾಡಿ

Meera--02

ನವದೆಹಲಿ, ನ.30- ಅಮೆರಿಕದ ಅನಹೀಮ್‍ನಲ್ಲಿ ನಡೆಯುತ್ತಿರುವ ವಿಶ್ವ ವೇಟ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಮೀರಾಬಾಯ್ ಚಾನು ಬಂಗಾರದ ಪದಕ ಗೆದ್ದಿದ್ದಾರೆ. ಈ ಮೂಲಕ ಎರಡು ದಶಕಗಳ ಬಳಿಕ ವಿಶ್ವ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತ ಚಿನ್ನದ ಸಾಧನೆಯ ಕೀರ್ತಿಗೆ ಪಾತ್ರವಾಗಿದೆ. ಬ್ರೆಜಿಲ್‍ನಲ್ಲಿ ನಡೆದ ರಿಯೋ ಒಲಂಪಿಕ್ಸ್‍ನಲ್ಲಿ ಆದ ಕಹಿ ಅನುಭವವನ್ನು ಮೀರಾ ಈ ಮೂಲಕ ಮರೆಯುವಂತೆ ಮಾಡಿದ್ದಾರೆ.

ಭಾರತೀಯ ರೈಲ್ವೆಯ ಉದ್ಯೋಗಿಯಾಗಿರುವ ಅವರು, ಮಹಿಳೆಯರ 48 ಕೆಜಿ ವಿಭಾಗದಲ್ಲಿ 85 ಕೆಜಿ ಸ್ನ್ಯಾಚ್ ಹಾಗೂ 109 ಕೆಜಿ ಕ್ಲೀನ್ ಅಂಡ್ ಜರ್ಕ್ ಸಾಧನೆಯೊಂದಿಗೆ ಒಟ್ಟು 194 ಕೆಜಿ ಭಾರ ಎತ್ತುವ ಮೂಲಕ ಸುವರ್ಣ ನಗೆ ಬೀರಿದರು. ಅಲ್ಲದೇ ಹೊಸ ರಾಷ್ಟ್ರೀಯ ದಾಖಲೆಯನ್ನೂ ಸೃಷ್ಟಿಸಿದ್ದರು. ಪೋಡಿಯಂ ಮೇಲೆ ಭಾರತದ ತ್ರಿವರ್ಣಧ್ವಜ ಹಾರುತ್ತಿದ್ದಂತೆ ಗೆಲವಿನ ಆನಂದ ಬಾಷ್ಟ ಅವರ ಕೆನ್ನೆಗಳ ಮೇಲೆ ಹನಿಹನಿಯಾಗಿ ಹರಿಯಿತು. ಒಲಿಂಪಿಕ್ ಕಂಚು ಪದಕ ವಿಜೇತೆ ಕರ್ಣಂ ಮಲ್ಲೇಶ್ವರಿ 1994 ಮತ್ತು 1995ರಲ್ಲಿ ಎರಡು ಬಾರಿ ವಿಶ್ವ ವೇಟ್‍ಲಿಫ್ಟಿಂಗ್ ಸ್ಪರ್ಧೆಯಲ್ಲಿ ಎರಡು ಬಾರಿ ಚಿನ್ನ ಗೆದ್ದಿದ್ದರು. ಅದಾದ 22 ವರ್ಷಗಳ ಬಳಿಕ ಮೀರಾ ಈ ಮೇರು ಸಾಧನೆ ಮಾಡಿದ್ದಾರೆ.

Facebook Comments

Sri Raghav

Admin