2050ರ ವೇಳೆಗೆ ವಿಶ್ವದಲ್ಲಿ 200ಕೋಟಿ ವಯೋವೃದ್ಧರು…!

ಈ ಸುದ್ದಿಯನ್ನು ಶೇರ್ ಮಾಡಿ

Aged-01

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 15 ವರ್ಷದೊಳಗಿನ ಮಕ್ಕಳ ಸಂಖ್ಯೆಯನ್ನು ಹಿರಿಯರು ಮೀರಿಸಲಿದ್ದಾರಂತೆ…ಹೌದು. ಸಮೀಕ್ಷೆಯೊಂದು ಈ ವಿಷಯ ಸ್ಪಷ್ಟಪಡಿಸಿದೆ. 2050ರ ವೇಳೆಗೆ ವಿಶ್ವದ ಜನಸಂಖ್ಯೆಯಲ್ಲಿ 60 ವರ್ಷ ಮೀರಿದವರ ಸಂಖ್ಯೆ 2 ಬಿಲಿಯನ್ ತಲುಪಲಿದೆಯಂತೆ. ಇಂತಹ ಪರಿಸ್ಥಿತಿಗೆ ನಮ್ಮ ಭಾರತ ಪ್ರಮುಖ ಕೊಡುಗೆ ನೀಡಲಿದೆ. ಅಂದರೆ ಈಗಿರುವ ಮೂರುಪಟ್ಟು ಹೆಚ್ಚಾಗಲಿದೆ. ಈಗ 100 ಮಿಲಿಯನ್ ವೃದ್ಧರ ಸಂಖ್ಯೆ ಇದೆ. 2050ರ ವೇಳೆಗೆ 300 ಮಿಲಿಯನ್ ಆಗಲಿದೆ. ಇದು ನಿಜಕ್ಕೂ ಬೆಚ್ಚಿ ಬೀಳಿಸುವ ಸಂಗತಿಯಾಗಿದೆ ಎಂದು ಸಮೀಕ್ಷೆ ನಡೆಸಿದ ಯುಎನ್ ಪಾಪ್ಯುಲೇಶನ್ ಫಂಡ್ ಇಂಡಿಯಾ ತಿಳಿಸಿದೆ.

ವರದಿ ಹೇಳುವಂತೆ ವಯೋಮಾನವೊಂದೇ ಹಿರಿಯರನ್ನು ಬಾಧಿಸುವುದಿಲ್ಲ. ಆದರೆ, ಇದರಿಂದ ಎದುರಾಗುವ ಪರಿಸ್ಥಿತಿಗಳನ್ನು ಇಡೀ ಸಮಾಜವೇ ಎದುರಿಸಬೇಕಾಗುತ್ತದೆ. ಆರೋಗ್ಯ ರಕ್ಷಣೆಯಂತಹ ಪ್ರಮುಖ ಸವಾಲುಗಳು ಎದುರಾಗುತ್ತವೆ. ಇಂತಹ ಸವಾಲುಗಳನ್ನು ಎದುರಿಸುವಲ್ಲಿ ಮನೆಯಾಧಾರಿತ ಆರೋಗ್ಯ ರಕ್ಷಣಾ ಕ್ಷೇತ್ರ ತನ್ನ ಸಂಪನ್ಮೂಲ, ಮನೆಯಲ್ಲೇ ಆರೋಗ್ಯ ಸೇವೆಯನ್ನು ನೀಡುವ ಮೂಲಕ ಪ್ರಮುಖ ಪಾತ್ರ ವಹಿಸಲಿದೆ. ಹೆಲ್ತ್‍ಕೇರ್ ಅಟ್ ಹೋಂ ಮೂಲಕ ವೃತ್ತಿಪರರಿಂದ ಆರೋಗ್ಯ ಸೇವೆ ಕಲ್ಪಿಸಿ ಹಿರಿಯರ ಆರೋಗ್ಯ ಮಟ್ಟವನ್ನು ಸುಧಾರಿಸುವುದು ಮತ್ತು ಸುದೀರ್ಘ ಅವಧಿವರೆಗೆ ಅವರ ಸ್ವತಂತ್ರ ಜೀವನ ಸಾಗಿಸುವಂತೆ ಸಾಧ್ಯ ಮಾಡಬಹುದು.

ಹಿರಿಯರ ಆರೈಕೆ ಮಾಡುವುದು ಕುಟುಂಬದ ಆದ್ಯ ಕರ್ತವ್ಯವಾಗಿದೆ. ಆದಾಗ್ಯೂ, ಪ್ರಸ್ತುತ ಸಾಂಪ್ರದಾಯಿಕ ಕುಟುಂಬ ರಚನೆ ಮಾಯವಾಗುವಂತೆ ಕಾಣುತ್ತಿದೆ. ಏಕೆಂದರೆ, ಉದ್ಯೋಗ ಹುಡುಕಿಕೊಂಡು ಮಕ್ಕಳು ಹೊರಗೆ ಹೋಗುವುದು, ದಂಪತಿ ಜೀವನ ಸಾಗಿಸಲು ಉದ್ಯೋಗ ಮಾಡುವುದು, ಸ್ಪರ್ಧಾತ್ಮಕತೆ ಮತ್ತು ಬ್ಯುಸಿಯಾದ ಜೀವನಶೈಲಿಯಂತಹ ಅಂಶಗಳು ನಮ್ಮ ಸಂಪ್ರದಾಯಿಕ ಕುಟುಂಬ ವ್ಯವಸ್ಥೆಯನ್ನು ಬದಲಾಯಿಸುತ್ತಿದೆ.

ಇದೇ ಕಾರಣಗಳಿಂದಾಗಿ ಹಿರಿಯರು ಎಷ್ಟು ಸಾಧ್ಯವೋ ಅಷ್ಟು ದಿನ ಸ್ವತಂತ್ರವಾಗಿ ಬದುಕಲು ಇಚ್ಚಿಸುತ್ತಿದ್ದಾರೆ. ಅವಿಭಕ್ತ ಕುಟುಂಬಗಳು ಛಿದ್ರವಾಗುತ್ತಾ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿವೆ. ಇದು ಹಿರಿಯರ ಆರೋಗ್ಯ ರಕ್ಷಣೆ ಮತ್ತು ಅವರ ಆರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಾಗಿದೆ. ಹಿರಿಯರ ಆರೋಗ್ಯ ರಕ್ಷಣೆಗೂ ಸಾಮಾನ್ಯ ರೋಗಿಗಳ ಆರೋಗ್ಯ ರಕ್ಷಣೆಗೂ ಭಾರೀ ವ್ಯತ್ಯಾಸವಿರುತ್ತದೆ. ಹೆಲ್ತ್‍ಕೇರ್ ಅಟ್ ಹೋಂನ ಕಾರ್ಯಕಾರಿ ಉಪಾಧ್ಯಕ್ಷ ಮತ್ತು ಸಿಒಒ ಡಾ.ಗೌರವ್ ತುಕ್ರಲ್ ಅವರು ಹೇಳುವಂತೆ ಗಂಭೀರ ಸ್ವರೂಪ ರೋಗದಿಂದ ಅಥವಾ ಇತರೆ ರೋಗಗಳಿಂದ ಅಂದರೆ ಸಂವಹನ ಮಾಡದ ರೋಗಗಳಿಂದ (ಎನ್‍ಸಿಡಿ) ಬಳಲುತ್ತಿರುವ ಹಿರಿಯ ಆರೋಗ್ಯ ರಕ್ಷಣೆಗೆ ಮನೆ ಆಧಾರಿತ ಆರೋಗ್ಯ ರಕ್ಷಣೆ ಅತ್ಯಗತ್ಯ. ಈ ಎನ್‍ಸಿಡಿಗಳು ವೃದ್ಧಾಪ್ಯದಲ್ಲಿ  ಸಾಮಾನ್ಯವಾಗಿ ಕಾಣಿಸಿಕೊಳ್ಳುವಂತಹ ರೋಗಗಳಾಗಿವೆ. ಕಾರ್ಡಿಯೋ ವಾಸ್ಕುಲರ್ ರೋಗಗಳು, ಶ್ವಾಸಕೋಶಕ್ಕೆ ಸಂಬಂಧಿಸಿದ ಅಸ್ತಮಾ, ಡಯಾಬಿಟೀಸ್, ಕ್ಯಾನ್ಸರ್, ಆರ್ಥಿರಿಟೀಸ್ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕದಡುವ ಅಲ್ಝಮೀರ್ ರೋಗ, ಖಿನ್ನತೆ ಮತ್ತು ರಕ್ತದೊತ್ತಡದಂತಹ ರೋಗಗಳು ಸಾಮಾನ್ಯ ಎನಿಸಿವೆ. ಅಷ್ಟೇ ಅಲ್ಲ, ಇಂತಹ ರೋಗಗಳು ಹಿರಿಯರ ಸಾವಿಗೂ ಕಾರಣವಾಗುತ್ತವೆ. ಡಯಾಬಿಟೀಸ್‍ನಂತಹ ದೀರ್ಘ ಕಾಲೀನ ರೋಗಗಳು ಸಾಮಾನ್ಯ ಎನಿಸಿಬಿಟ್ಟಿವೆ. ಇಂತಹ ರೋಗಗಳು ಹಿರಿಯರನ್ನು ಸಾಮಾನ್ಯವಾದ ದೈನಂದಿನ ಚಟುವಟಿಕೆಗಳಲ್ಲಿ ತೊಡಗಲು ಅಡ್ಡಿ ಉಂಟು ಮಾಡುತ್ತವೆ. ಇದು ಅವರನ್ನು ನೋಡಿಕೊಳ್ಳುವವರಿಗೆ ಹೊರೆಯಾಗಿ ಪರಿಣಮಿಸಲಿದೆ.

ಮನೆ ಆಧಾರಿತ ಆರೋಗ್ಯ ರಕ್ಷಣೆ ಸೇವೆಗಳು ದೀರ್ಘಾವಧಿ ರೋಗಗಳಿಗೆ ಪರಿಣಾಮಕಾರಿ ಮತ್ತು ಆರ್ಥಿಕ ಉಳಿತಾಯದಿಂದ ಕೂಡಿರುತ್ತವೆ. ಜೀವನ ಶೈಲಿಯ ಬದಲಾವಣೆಗಳು, ದೀರ್ಘಾವಧಿ ರೋಗಗಳಿಗೆ ಚಿಕಿತ್ಸೆ ಮತ್ತು ಹಿರಿಯ ಆರೈಕೆಯಂತಹ ಸೇವೆಗಳನ್ನು ಒದಗಿಸುವ ಮೂಲಕ ಲೈಫ್ ಕೇರ್ ಅಟ್ ಹೋಂ ಅನ್ನು ಒದಗಿಸುತ್ತವೆ. ಇದಲ್ಲದೆ ಡಯಾಬಿಟಿಕ್‍ನಿಂದ ಬಳಲುತ್ತಿರುವವರಿಗೆ ಡಯಾಬೀಯಂತಹ ಸೇವೆಗಳನ್ನು ಈ ಹೆಲ್ತ್‍ಕೇರ್ ಅಟ್ ಹೋಂ ನೀಡುತ್ತದೆ. ಸಾಮಾನ್ಯವಾಗಿ ದೀರ್ಘಕಾಲೀನ ರೋಗಗಳಿಗೆ ತುತ್ತಾದ ಹಿರಿಯರು ಕಾಲ ಕಾಲಕ್ಕೆ ವೈದ್ಯರ ಬಳಿ ಹೋಗಬೇಕಾಗುತ್ತದೆ. ಆದರೆ, ಹೆಲ್ತ್‍ಕೇರ್ ಅಟ್ ಹೋಂನ ನುರಿತ ವೈದ್ಯಕೀಯ ಸಿಬ್ಬಂದಿ ಮನೆಯಲ್ಲಿಯೇ ಹಿರಿಯರಿಗೆ ಸೂಕ್ತ ತಪಾಸಣೆ ನಡೆಸಿ ಚಿಕಿತ್ಸೆಗಳನ್ನು ನೀಡಲಿದ್ದಾರೆ. ಸೇವೆಗಳಲ್ಲಿ ಸಾಕಷ್ಟು ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಈ ನಿಟ್ಟಿನಲ್ಲಿ ಹೆಲ್ತ್‍ಕೇರ್ ಅಟ್ ಹೋಂ ರೋಗಿಯ ಫಿಟ್‍ನೆಸ್ ಮಟ್ಟಗಳು, ಡಯಟ್ ಚಾಟ್ರ್ಸ್, ಅಪ್ ಟು ಡೇಟ್ ಮೆಡಿಕಲ್ ರಿಪೆÇೀರ್ಟ್ ಮತ್ತು ಸಮಗ್ರ ಆರೋಗ್ಯ ತಪಾಸಣೆ ಆಸ್ಪತ್ರೆಗೆ ಹೋಗುವುದು ಸೇರಿದಂತೆ ಹತ್ತಾರು ಮಾಹಿತಿಗಳನ್ನು ನೀಡುವ ಡಯಾಬೀ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.

ಈ ಹಿನ್ನೆಲೆಯಲ್ಲಿ ತಮ್ಮ ಕುಟುಂಬದ ಹಿರಿಯ ದೀರ್ಘಕಾಲೀನ ರೋಗಗಳಿಗೆ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಕುಟುಂಬಗಳು ಇದೀಗ ಹೋಂ ಕೇರ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಿವೆ. ಇನ್ನೊಂದು ಅತ್ಯಂತ ಪ್ರಮುಖ ಲಾಭವೆಂದರೆ ಹಣದ ಉಳಿತಾಯವಾಗುವುದು. ಪದೇ ಪದೇ ವೈದ್ಯರ ಬಳಿ ಹೋಗುವುದು ಮತ್ತು ಆಸ್ಪತ್ರೆ ಒಳರೋಗಿಗಳಾಗಿ ದಾಖಲಾಗುವ ಪ್ರಮೇಯವೂ ಇರುವುದಿಲ್ಲ. ಈ ಮೂಲಕ ಆಸ್ಪತ್ರೆಯಲ್ಲಿ ಪಡೆಯುವ ಚಿಕಿತ್ಸೆಗೆ ಮಾಡುವ ವೆಚ್ಚಕ್ಕಿಂದ ಶೇ.10ರಿಂದ 50ರಷ್ಟು ವೆಚ್ಚ ಈ ಹೆಲ್ತ್‍ಕೇರ್ ಅಟ್ ಹೋಂನಿಂದಾಗುತ್ತದೆ. ಈ ಮೂಲಕ ಹೋಂ ಕೇರ್ ಹಿರಿಯರ ರೋಗಗಳಿಗೆ ಪರಿಣಾಮಕಾರಿ ಮತ್ತು ರೋಗ ನಿಯಂತ್ರಣ ಚಿಕಿತ್ಸೆ ನೀಡಲಿದೆ. ತಾಂತ್ರಿಕವಾಗಿ ಸುಸಜ್ಜಿತವಾದ ಆರೈಕೆ ತಂಡವು ಎಲ್ಲಾ ವೈದ್ಯಕೀಯ ಪರಿಸ್ಥಿತಿಗಳನ್ನು ನಿಭಾಯಿಸಲಿದ್ದು, ಕೆಲವೊಂದು ವಿಶೇಷ ಕ್ರಮಗಳನ್ನು ಅನುಸರಿಸುತ್ತದೆ. ಆಹಾರ ನೀಡುವುದು, ಸ್ನಾನ ಮಾಡಿಸುವುದು, ಡ್ರೆಸ್ಸಿಂಗ್, ದೈಹಿಕವಾಗಿ ಸಮರ್ಥರಿರುವಂತೆ ನೋಡಿಕೊಳ್ಳುವುದು ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವಂತೆ ನೋಡಿಕೊಳ್ಳುವುದು ಬಹಳ ಕಷ್ಟಕರವಾದ ಕೆಲಸ. ಆದರೆ ಹೋಂ ಕೇರ್ ನೀಡುವ ನರ್ಸಿಂಗ್ ಸೇವೆಗಳು ಕೇವಲ ವೈದ್ಯಕೀಯ ಚಿಕಿತ್ಸೆಗಳಿಗೆ ಸೀಮಿತವಾಗಿರುವುದಿಲ್ಲ. ಬದಲಿಗೆ ಅವರ ದೈನಂದಿನ ಬದುಕಿನ ಅಗತ್ಯತೆಗಳನ್ನು ದಿನದ 24 ಗಂಟೆಯೂ ಸೇವೆಯನ್ನು ಒದಗಿಸುತ್ತದೆ.

ವೃದ್ಧಾಪ್ಯದ ಕಾಳಜಿಯ ಬೇಡಿಕೆಗಳು ಹೆಚ್ಚು ಹೆಚ್ಚು ಮತ್ತು ವಿಭಿನ್ನವಾಗಿರುವುದರಿಂದ ಅವರು ವೃತ್ತಿಪರ ಆರೈಕೆಯನ್ನು ಪಡೆಯುವುದು ಮುಖ್ಯವಾಗಿರುತ್ತದೆ. ಮನೆಯಾಧಾರಿತ ಆರೋಗ್ಯ ರಕ್ಷಣೆ ವಯಸ್ಸಾದ ರೋಗಿಗಳಲ್ಲಿನ ಕಾಯಿಲೆಗಳನ್ನು ಯಶಸ್ವಿ ವೈದ್ಯಕೀಯ ಫಲಿತಾಂಶಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಅವರು ಸಹಾನುಭೂತಿಯಿಂದ ಅದನ್ನು ಖಚಿತಪಡಿಸಿಕೊಳ್ಳುತ್ತಾರೆ.

Facebook Comments

Sri Raghav

Admin