ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿದ ಇಎಸ್‍ಐ ಆಸ್ಪತ್ರೆ ಸಿಬ್ಬಂದಿ

ಈ ಸುದ್ದಿಯನ್ನು ಶೇರ್ ಮಾಡಿ

esi

ಬೆಂಗಳೂರು, ಡಿ.1- ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಇಂದು ರಾಜಾಜಿನಗರ ಇಎಸ್‍ಐ ಮಾದರಿ ಆಸ್ಪತ್ರೆಯಲ್ಲಿ ಎಚ್‍ಐವಿ /ಏಡ್ಸ್ ಕುರಿತ ಜಾಗೃತಿ ಜಾಥಾ ಮತ್ತು ಸಾರ್ವಜನಿಕರಿಗೆ ಉಚಿತ ಎಚ್‍ಐವಿ ರಕ್ತ ಪರೀಕ್ಷೆ ಕಾರ್ಯ ಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆ ಯನ್ನು ಇಎಸ್‍ಐ ಮಾದರಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಡೀನ್ ಡಾ.ಜಿತೇಂದ್ರ ಕುಮಾರ್ ಉದ್ಘಾಟಿಸಿದರು.
ಜಾಥಾ ಉದ್ಘಾಟನೆಯನ್ನು ಡಿಐಜಿ( ರಸ್ತೆ ಸುರಕ್ಷತೆ ಮತ್ತು ಸಂಚಾರ) ಡಿ.ರೂಪ ಮೌದ್ಗಿಲ್ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕಿ ಡಾ.ರಚಿತಾ ಬಿಸ್ವಾಸ್, ಚರ್ಮರೋಗ ತಜ್ಞರಾದ ಡಾ.ಗಿರೀಶ್, ಡಾ.ಕೀರ್ತಿ ಮೆನನ್, ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ತಜ್ಞರಾದ ಡಾ.ಮಂಗಳಗೌರಿ ಹಾಗೂ ಆಪ್ತ ಸಮಾಲೋಚಕ ರಾದ ಆರ್.ಲಕ್ಷ್ಮೀನಾರಾಯಣ, ಆರ್.ಲಿಂಗರಾಜು, ಎ.ರಾಜೇಶ್ ಮುಂತಾದವರು ಪಾಲ್ಗೊಂಡಿ ದ್ದರು. ನಾಟಕ ಪ್ರದರ್ಶನ: ಸಂಜೆ 4 ಗಂಟೆಗೆ ಜ್ಞಾನಭಾರತಿ ಸಮೀಪ ಇರುವ ಸಾಂಸ್ಕøತಿಕ ಸಮುಚ್ಚಯ ಕಲಾಗ್ರಾಮದಲ್ಲಿ ಎಚ್ಚರ ಮನುಜ ಎಚ್ಚರ ಎಂಬ ನಾಟಕ ಪ್ರದರ್ಶನ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆ ಯನ್ನು ಸಪ್ತಗಿರಿ ವೈದ್ಯಕೀಯ ಕಾಲೇಜಿನ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಅಂಜನಪ್ಪ ಟಿ.ಎಚ್. ನೆರವೇರಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಮಹಾನಗರ ಜನತಾದಳದ ಅಧ್ಯಕ್ಷ ಆರ್.ಪ್ರಕಾಶ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದರ್ಶನ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಅ.ದೇವೇಗೌಡ, ಬೆಂಗಳೂರು ನಗರ ಜಿಲ್ಲೆ ಕಸಾಪ ಅಧ್ಯಕ್ಷ ಅನಿಕೇತನ ಮಾಯಣ್ಣ, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ರಾಷ್ಟ್ರೀಯ ಕಾರ್ಯದರ್ಶಿ ಸುಜಾತಾ, ರಂಗಕರ್ಮಿ ಆಂಜನೇಯ ಪಾಲ್ಗೊಳ್ಳಲಿದ್ದಾರೆ. ಜಾಥಾ ವೇಳೆ ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕ ಆರ್.ಲಕ್ಷ್ಮೀನಾರಾಯಣ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಹ ಎಚ್‍ಐವಿ/ಏಡ್ಸ್ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ. ಈ ಬಾರಿ ಆರೋಗ್ಯ ಎಲ್ಲರ ಹಕ್ಕು-ನನ್ನ ಆರೋಗ್ಯ ನನ್ನ ಹಕ್ಕು ಎಂಬ ಘೋಷವಾಕ್ಯದಡಿ ಅರಿವು ಮೂಡಿಸಲಾಗುತ್ತಿದೆ ಎಂದರು.ಇಎಸ್‍ಐ ಮಾದರಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಎಚ್‍ಐವಿ ರಕ್ತ ಪರೀಕ್ಷೆ ಮತ್ತು ಆಪ್ತಸಮಾಲೋಚನೆ ಮಾಡಲಾಗುತ್ತಿದೆ. ಅಲ್ಲದೆ, ಕಳೆದ ಏಪ್ರಿಲ್ ತಿಂಗಳಿನಿಂದ ಸೋಂಕಿತ ಗರ್ಭಿಣಿರಿಗೆ ಜನಿಸುವ ಮಕ್ಕಳಿಗೂ ಸಹ ಡಿಬಿಎಸ್ ಪರೀಕ್ಷೆಗಳನ್ನು ಮಾಡುತ್ತಿದ್ದೇವೆ ಎಂದರು.

Facebook Comments

Sri Raghav

Admin