ಏ.30ಕ್ಕೆ ಜಪಾನ್ ಚಕ್ರವರ್ತಿ ಅಕಿಹಿಟೋ ಪದತ್ಯಾಗ

ಈ ಸುದ್ದಿಯನ್ನು ಶೇರ್ ಮಾಡಿ

Japan--03

ಟೋಕಿಯೊ, ಡಿ.1-ಉದಯರವಿ ನಾಡು ಜಪಾನ್ ಚಕ್ರವರ್ತಿ ಅಕಿಹಿಟೋ ಮುಂದಿನ ವರ್ಷ ಏಪ್ರಿಲ್ 30ರಂದು ಪದತ್ಯಾಗ ಮಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಶಿಂಜೋ ಅಬೆ ಇಂದು ಘೋಷಿಸಿದ್ದಾರೆ. ವಿಶ್ವದ ಅತ್ಯಂತ ಪುರಾತನ ರಾಜಮನೆತನಗಳಲ್ಲಿ ಒಂದೆಂದು ಪರಿಗಣಿಸಲಾಗಿರುವ ಜಪಾನ್ ಚಕ್ರಾಧಿಪತ್ಯದ ಎರಡು ಶತಮಾನಗಳ ಇತಿಹಾಸದಲ್ಲಿ ನಿವೃತ್ತಿ ಘೋಷಣೆಯಾಗುತ್ತಿರುವುದು ಇದೇ ಮೊದಲು.

ಅನಾರೋಗ್ಯ ಕಾರಣಗಳಿಂದಾಗಿ 83 ವರ್ಷದ ಜನಪ್ರಿಯ ಚಕ್ರವರ್ತಿ ಅವರು ಪದತ್ಯಾಗ ಮಾಡುತ್ತಿದ್ದಾರೆ. ಅವರ ನಿವೃತ್ತಿ ದಿನಾಂಕ ನಿರ್ಧರಿಸಲು ನಡೆದ ರಾಜಸ್ಥ ಮಂಡಳಿಯ ವಿಶೇಷ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅಬೆ ತಿಳಿಸಿದರು. ಎಂಟು ದಶಕಗಳಿಗೂ ಹೆಚ್ಚು ಕಾಲ ಉದಯರವಿ ನಾಡಿನ ಚಕ್ರವರ್ತಿಯಾಗಿರುವ ಅಕಿಹಿಟೋ ಅವರ ನಿವೃತ್ತಿ ಸಮಾರಂಭವನ್ನು ಜಪಾನೀಯರು ಅತ್ಯಂತ ಸಂತೋಷದಿಂದ ಆಚರಿಸಲು ಹಾಗೂ ಮುಂದಿನ ರಾಜಕುಮಾರ ಪಟ್ಟಾಭಿಷೇಕಕ್ಕೆ ಅನುವು ಮಾಡಿಕೊಡಲು ಸರ್ಕಾರ ಅಗತ್ಯವಾದ ಸಕಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರಧಾನಿ ವಿವರಿಸಿದ್ದಾರೆ.

Facebook Comments

Sri Raghav

Admin