ಕ್ಷುಲ್ಲಕ ಕಾರಣಕ್ಕೆ ಗರ್ಭಿಣಿ ಮೇಲೆ ಹಲ್ಲೆ, ಹೊಟ್ಟೆಯಲ್ಲೇ ಮಗು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Pregnent--01

ದಾವಣಗೆರೆ,ಡಿ.1- ಕ್ಷುಲ್ಲಕ ಕಾರಣಕ್ಕಾಗಿ ಏಳು ತಿಂಗಳ ಗರ್ಭಿಣಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ಶಿಶು ಗರ್ಭದಲ್ಲೇ ಸಾವನ್ನಪ್ಪಿರುವ ಘಟನೆ ನಗರ ಹೊರವಲಯದ ಪರಮೇನಹಳ್ಳಿಯಲ್ಲಿ ನಡೆದಿದೆ. ಪರಮೇನಹಳ್ಳಿಯ ಕವಿತಾ(32) ಅವರು ಹಲ್ಲೆಗೊಳಗಾದವರು.  ಗ್ರಾಮಪಂಚಾಯ್ತಿ ಸದಸ್ಯರಾದ ಗೌಡ್ರ ಮಂಜಪ್ಪ , ರಾಜಪ್ಪ ಮತ್ತು ರಘು ಅವರು ಗರ್ಭಿಣಿ ಕವಿತಾ ಹಾಗೂ ಆಕೆಯ ಅಕ್ಕ ನೇತ್ರಮ್ಮನವರ ಮೇಲೂ ಹಲ್ಲೆ ನಡೆಸಿದ್ದು , ಗಾಯಗೊಂಡ ನೇತ್ರಮ್ಮ ಹಾಗೂ ಕವಿತಾ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin