ನರ್ಸರಿ ಬಾಲಕಿ ಮೇಲೆ ಶಿಕ್ಷಕನಿಂದ ಅತ್ಯಾಚಾರ

ಈ ಸುದ್ದಿಯನ್ನು ಶೇರ್ ಮಾಡಿ

Girl-Rape--02

ಕೋಲ್ಕತಾ, ಡಿ.1-ದೇಶದ ವಿವಿಧೆಡೆ ಅಪ್ರಾಪ್ತರ ಮೇಲೆ ಲೈಂಗಿಕ ದುರಾಚಾರ ಪ್ರಕರಣಗಳು ಹೆಚ್ಚಾಗಿ ಆತಂಕದ ವಾತಾವರಣ ಸೃಷ್ಟಿಯಾಗಿರುವಾಗಲೇ ಕೋಲ್ಕತಾದ ಪ್ರತಿಷ್ಠಿತ ಶಾಲೆಯೊಂದರ ದೈಹಿಕ ಶಿಕ್ಷಕನೊಬ್ಬ ನಾಲ್ಕು ವರ್ಷದ ನರ್ಸರಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಹೀನ ಘಟನೆ ನಡೆದಿದೆ. ಈ ಘಟನೆ ನಂತರ ಅನೇಕ ಪೋಷಕರು ಇಂದು ಶಾಲೆ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿನಿಯ ಪೋಷಕರು ನೀಡಿದ ದೂರಿನನ್ವಯ ಪಿಟಿ ಶಿಕ್ಷಕನನ್ನು ಜಾ ಧವ್‍ಪುರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ಶಾಲೆಯಿಂದ ಅಳುತ್ತಾ ಮನೆಗೆ ಹಿಂದಿರುಗಿದ ಮಗು ಹೊಟ್ಟೆಯ ಭಾಗದಲ್ಲಿ ತೀವ್ರ ನೋವು ಎಂದು ಪೋಷಕರಿಗೆ ತಿಳಿಸಿತು. ಆಕೆಯ ಬಟ್ಟೆಯ ಮೇಲೆ ರಕ್ತದ ಕಲೆಗಳು ಇರುವುದನ್ನು ಗಮನಿಸಿದ ತಾಯಿ ಮಗುವನ್ನು ವಿಚಾರಿಸಿದಾಗ ದೈಹಿಕ ಶಿಕ್ಷಕನ ನೀಚ ಕೃತ್ಯ ಬೆಳಕಿಗೆ ಬಂದಿತು. ಪಿಟಿ ಟೀಚರ್ ತನ್ನನ್ನು ವಾಶ್‍ರೂಮ್‍ಗೆ ಕರೆದೊಯ್ಡು ನಡೆಸಿದ ಕೃತ್ಯವನ್ನು ಬಾಲಕಿ ತಿಳಿಸಿದಳು. ನಂತರ ಬಾಲಕಿಯನ್ನು ಶಿಶು ತಜ್ಞರ ಬಳಿ ತಪಾಸಣೆಗೆ ಒಳಪಡಿಸಿ ನಂತರ ದಕ್ಷಿಣ ಕೋಲ್ಕತಾದಲ್ಲಿರುವ ಎಸ್‍ಎಸ್‍ಕೆಎಂ ಆಸ್ಪತೆಗೆ ದಾಖಲಿಸಲಾಯಿತು. ಬಾಲಕಿಯನ್ನು ಪರೀಕ್ಷೆಗೆ ಒಳಪಡಿಸಿದ ವೈದ್ಯರು ಮಗುವಿನ ಮೇಲೆ ಅತ್ಯಾಚಾರ ನಡೆದಿರುವುದನ್ನು ಖಚಿತಪಡಿಸಿದರು.

ಪೋಷಕರು ನೀಡಿದ ದೂರಿನ ಮೇರೆಗೆ ಕಾಮುಕ ಶಿಕ್ಷಕನನ್ನು ಬಂಧಿಸಲಾಗಿದೆ. ಅನೇಕ ಪೋಷಕರು ಇಂದು ಶಾಲೆಯ ಗೇಟ್ ಬಳಿ ಜಮಾಯಿಸಿ ಭಾರೀ ಪ್ರತಿಭಟನೆ ನಡೆಸಿ ತಪ್ಪಿತಸ್ಥನ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಪ್ರಕರಣವು ಬೆಂಗಳೂರಿನ ವಿಬ್‍ಗಯಾರ್ ಶಾಲೆಯಲ್ಲಿ ಮಗುವಿನ ಮೇಲೆ ದೈಹಿಕ ಶಿಕ್ಷಕ ನಡೆಸಿದ ಅತ್ಯಾಚಾರದ ಹೀನ ಘಟನೆಯನ್ನು ನೆನಪಿಸುತ್ತದೆ.

Facebook Comments

Sri Raghav

Admin