‘ಮುಖ್ಯಮಂತ್ರಿಗೆ ಬಚ್ಚಾ ಎನ್ನುವುದು ಯಡಿಯೂರಪ್ಪನವರ ಸಂಸ್ಕೃತಿಯನ್ನು ಬಿಂಬಿಸುತ್ತದೆ’ : ಎಂ.ಬಿ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

MB-Patil-01
ಬಿಜಾಪುರ,ಡಿ.1- ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಏಕವಚನದಲ್ಲಿ ಸಂಬೋಧಿಸಿಹಾಗೂ ಅವಹೇಳನಕಾರಿ ಹೇಳಿಕೆ ನೀಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವರ್ತನೆಯನ್ನು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಖಂಡಿಸಿದ್ದಾರೆ. ಬಿಜಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಖ್ಯಮಂತ್ರಿ ಅವರಿಗೆ ಬಚ್ಚಾ ಎನ್ನುವುದು, ಏಕವಚನದಲ್ಲಿ ಮಾತನಾಡುವುದು ಸರಿಯಾದ ಕ್ರಮವಲ್ಲ. ಅದು ಅವರ ಸಂಸ್ಕøತಿಯನ್ನು ತೋರಿಸುತ್ತದೆ. ಹಿರಿಯರು, ಕಿರಿಯರಿಗೆ ಪಾಠ ಹೇಳಬೇಕು, ಸಂಸ್ಕøತಿ ಕಲಿಸಬೇಕು ಎಂದರು.
ರಾಜ್ಯದಲ್ಲಿ ಮುಂದೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಹತಾಶರಾಗಿರುವ ಯಡಿಯೂರಪ್ಪ ಮನಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನನ್ನ ವಿರುದ್ಧವೂ ಏಕವಚನದಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಆದರೆ ನಾನು ಅವರ ವಯಸ್ಸನ್ನು ಪರಿಗಣನೆ ಮಾಡಿ ಮೌನ ವಹಿಸಿದ್ದೇನೆ ಎಂದು ಅವರು ಹೇಳಿದರು.

ನಿನ್ನೆ ವಿಜಯಪುರದಲ್ಲಿ ನಡೆದ ಪರಿವರ್ತನಾ ಸಮಾವೇಶದಲ್ಲಿ ಮೋದಿ ಅವರಿಗೆ ನನ್ನನ್ನು ಕಂಡರೆ ಭಯ ಎಂದು ಹೇಳಿರುವ ಸಿದ್ದರಾಮಯ್ಯ ಒಬ್ಬ ಬಚ್ಚಾ ಎಂದು ಯಡಿಯೂರಪ್ಪ ಆವೇಶಭರಿತರಾಗಿ ಮಾತನಾಡಿದ್ದರು. ಈ ಮಾತು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಂ.ಬಿ.ಪಾಟೀಲ್, ಯಡಿಯೂರಪ್ಪನವರು ಅನಗತ್ಯವಾಗಿ ನನ್ನ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ.

ನಾನು ನಮ್ಮ ವಕೀಲರೊಂದಿಗೆ ಚರ್ಚಿಸಿ ಅವರಿಗೆ ಸದ್ಯದಲ್ಲೇ ನೋಟಿಸ್ ಕಳುಹಿಸುತ್ತೇನೆ ಎಂದ ಅವರು, ನಮ್ಮನ್ನು ಮುಖ್ಯಮಂತ್ರಿಗಳ ಕಮೀಷನ್ ಏಜೆಂಟ್ ಎಂದು ಹೇಳಿದ್ದಾರೆ. ಇದು ಆಧಾರರಹಿತ ಆರೋಪವಾಗಿದೆ. ಇವರು ಯಾವ ರೀತಿ ಕಮೀಷನ್ ಪಡೆದಿದ್ದರು ಎಂಬುದನ್ನು ಅರಿಯಲಿ. ಚೆಕ್ ಮೂಲಕವೇ ಕಮೀಷನ್ ಪಡೆದು ಸಿಕ್ಕಿಹಾಕಿಕೊಂಡ ಮೊದಲ ಮುಖ್ಯಮಂತ್ರಿ ಎಂಬುದು ಜಗಜ್ಜಾಹಿರವಾಗಿದೆ. ಅಂಥವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಪಾಟೀಲ್ ಗುಡುಗಿದರು.

Facebook Comments

Sri Raghav

Admin