ರಾಜ್ಯದಾದ್ಯಂತ ಶ್ರದ್ದಾಭಕ್ತಿಯಿಂದ ಹನುಮ ಜಯಂತಿ ಆಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

Jai-Sri-Ram--01

ಬೆಂಗಳೂರು,ಡಿ.1-ನಾಡಿನೆಲ್ಲೆಡೆ ಇಂದು ವಿವಿಧ ದೇವಾಲಯಗಳಲ್ಲಿ ಭಕ್ತರು ಶ್ರದ್ದಾಭಕ್ತಿಯಿಂದ ಹನುಮ ಜಯಂತಿಯನ್ನು ಆಚರಿಸಿದರು. ಬೆಂಗಳೂರಿನ ಗಾಳಿ ಆಂಜನೇಯ, ತುಮಕೂರಿನ ಕೋಟೆ ಆಂಜನೇಯ, ಮೈಸೂರು ರಸ್ತೆಯ ಕೋತಿ ಆಂಜನೇಯ, ಬಾಗೇಪಲ್ಲಿಯ ಬೈಲಾಂಜನೇಯ ಸೇರಿದಂತೆ ನಾಡಿನಾದ್ಯಂತ ಹನುಮ ದೇವಾಲಯಗಳಲ್ಲಿ ಇಂದು ಬೆಳಗ್ಗೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು.

ಜಿಟಿಜಿಟಿ ಮಳೆಯಲ್ಲೂ ಸಹ ಭಕ್ತರು ದೇವಸ್ಥಾನಗಳಿಗೆ ತೆರಳುತ್ತಿದ್ದ ದೃಶ್ಯಗಳು ಕಂಡುಬಂತು. ಹನುಮ ಜಯಂತಿ ಹಿನ್ನೆಲೆಯಲ್ಲಿ ಹಲವು ದೇವಾಲಯಗಳಲ್ಲಿ ಆಂಜನೇಯನಿಗೆ ಬೆಣ್ಣೆ ಅಲಂಕಾರ, ತರಕಾರಿ, ಹೂವು ಅಲಂಕಾರ ಸೇರಿದಂತೆ ಕಜ್ಜಾಯ, ಕೋಡಬಳೆ ಮತ್ತಿತರ ವಿವಿಧ ತಿನಿಸುಗಳಿಂದ ಹನುಮನಿಗೆ ಮಾಡಿದ ಅಲಂಕಾರ ಭಕ್ತರ ಕಣ್ಮನಸೆಳೆಯಿತು.

Facebook Comments

Sri Raghav

Admin