ಶಿವಣ್ಣ ನಟನೆಯ’ಕವಚ’ನಿಗೆ ಶುಭ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

kavacha

ನಟ ಶಿವರಾಜಕುಮಾರ್ 15 ವರ್ಷ ಗಳ ನಂತರ ರೀಮೇಕ್ ಚಿತ್ರವೊಂದರಲ್ಲಿ ನಟಿಸು ತ್ತಿದ್ದಾರೆ. ಮಲೆಯಾಳಂನ ಒಪ್ಪಂ ಚಿತ್ರದ ರೀಮೇಕ್‍ನಲ್ಲಿ ಶಿವರಾಜ್‍ಕುಮಾರ್ ಒಬ್ಬ ಕುರುಡನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಕವಚ ಎಂಬ ಶೀರ್ಷಿಕೆಯ ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನೆರವೇರಿತು.
ಮಲಯಾಳಂನ ಮೋಹನ್‍ಲಾಲ್ ಮಾಡಿದ್ದ ಕುರುಡನ ಪಾತ್ರವನ್ನು ಕನ್ನಡದಲ್ಲಿ ಡಾ. ಶಿವರಾಜ್ ಕುಮಾರ್ ಅವರು ನಿರ್ವಹಿಸಿದ್ದಾರೆ. ಈ ಚಿತ್ರ ವನ್ನು ಎಚ್‍ಎಂಎ ಸಿನಿಮಾ ಬ್ಯಾನರ್ ಅಡಿಯಲ್ಲಿ ಎಂವಿವಿ ಸತ್ಯನಾರಾಯಣ ಮತ್ತು ಎ.ಸಂಪತ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಜಿ.ವಿ.ಆರ್. ವಾಸು ಈ ಚಿತ್ರಕ್ಕೆ ಆ್ಯಕ್ಷನ್ -ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್‍ಕುಮಾರ್ ಅವರ ಜೊತೆ ಕೃತಿಕಾ ಹಾಗೂ ಇಶಾ ಕೊಪ್ಪಿಕರ್ ನಾಯಕಿಯರಾಗಿ ಕಾಣಿಸಿ ಕೊಳ್ಳುತ್ತಿದ್ದಾರೆ.
ಉಳಿದ ಪಾತ್ರಗಳಲ್ಲಿ ರವಿಕಾಳೆ, ತಬಲಾ ನಾಣಿ, ವಸಿಷ್ಠ ಸಿಂಹ, ಲಯೇಂದ್ರ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ. ರಾಹುಲ್ ಶ್ರೀ ವಾತ್ಸವ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡು ತ್ತಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ನಟ ವಸಿಷ್ಟ ಸಿಂಹ ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಮುಹೂರ್ತದ ನಂತರ ಪತ್ರಕರ್ತರೊಂದಿಗೆ ಮಾತ ನಾಡಿದ ನಟ ಶಿವರಾಜ್‍ಕುಮಾರ್ ಇದೇ ಮೊದಲ ಬಾರಿಗೆ ನಾನು ಕುರುಡನ ಪಾತ್ರವನ್ನು ಮಾಡುತ್ತಿದ್ದೇನೆ. ಪಾತ್ರ ಸಾಕಷ್ಟು ಚಾಲೆಂಜಿಂಗ್ ಆಗಿದೆ. ಉತ್ತಮವಾದ ಕಥೆ, ಅಭಿನಯಕ್ಕೆ ಅವಕಾಶವಿರುವ ಪಾತ್ರವಾಗಿರುವುದರಿಂದ ಈ ಚಿತ್ರವನ್ನು ಒಪ್ಪಿಕೊಂಡಿದ್ದೇನೆ ಎಂದರು.
ಈ ಚಿತ್ರದ ನಿರ್ದೇಶಕರಾದ ಜಿ.ಆರ್.ವಿ.ವಾಸು ಈ ಹಿಂದೆ ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿ ರಾಂಗೋಪಾಲ್ ವರ್ಮ ಅವರ ಜೊತೆ ಕೆಲಸ ಮಾಡಿದ್ದರು. ಆಗಲೇ ಶಿವಣ್ಣ ಅವರ ಜೊತೆ ಒಂದು ಚಿತ್ರ ಮಾಡುವ ಸಂಕಲ್ಪ ಮಾಡಿದ್ದರಂತೆ. ಈ ಚಿತ್ರದಲ್ಲಿ ನೆಟಿವಿಟಿಗೆ ತಕ್ಕಂತೆ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ ಎಂದು ಹೇಳಿದರು.

Facebook Comments

Sri Raghav

Admin