ಸಿಸಿಬಿ ಪೊಲೀಸರಿಂದಲೇ 1 ಕೋಟಿ ಲೂಟಿ..!

ಈ ಸುದ್ದಿಯನ್ನು ಶೇರ್ ಮಾಡಿ

ccb branch

ಬೆಂಗಳೂರು, ಡಿ.1- ವೈಟ್ ಅಂಡ್ ಬ್ಲಾಕ್ ದಂಧೆಯಲ್ಲಿ ಹಳೆ ನೋಟನ್ನು ಹೊಸ ನೋಟಿಗೆ ಬದಲಾವಣೆ ಮಾಡಿಕೊಳ್ಳಲು ಹವಣಿಸುತ್ತಿದ್ದ ವ್ಯಕ್ತಿಯಿಂದ ಒಂದು ಕೋಟಿ ಹಳೆ ನೋಟನ್ನು ಲೂಟಿ ಮಾಡಿದ್ದು ಸಿಸಿಬಿ ಪೊಲೀಸರೇ ಎಂಬುದು ಸಾಬೀತಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ತೀವ್ರಗೊಂಡಿದೆ. ವೈಟ್ ಅಂಡ್ ಬ್ಲಾಕ್ ದಂಧೆಯಲ್ಲಿ ಒಂದು ಕೋಟಿ ಹಳೆ ನೋಟನ್ನು ಹೊಸ ನೋಟಿಗೆ ಬದಲಾವಣೆ ಮಾಡಿಕೊಳ್ಳಲು ಹೊಂಚು ಹಾಕುತ್ತಿದ್ದ ವ್ಯಕ್ತಿಗೆ ನಾವು ಪೊಲೀಸರೆಂದು ಹೇಳಿ ಹಣ ಲಪಟಾಯಿಸಿದ ವ್ಯಕ್ತಿಗಳನ್ನು ಸಿಸಿಬಿಯ ಒಬ್ಬ ಎಎಸ್‍ಐ ಹಾಗೂ ಇಬ್ಬರು ಹೆಡ್ ಕಾನ್ಸ್‍ಟೆಬಲ್‍ಗಳೆಂದು ಪತ್ತೆ ಹಚ್ಚಲಾಗಿದೆ.

ಸಿಸಿಬಿ ಪೊಲೀಸರೇ ಒಂದು ಕೋಟಿ ಹಣ ಅಪಹರಿಸಿದ್ದ ಪ್ರಕರಣವನ್ನು ಡಿಸಿಪಿ ಚಂದ್ರಗುಪ್ತ ತನಿಖೆ ನಡೆಸುತ್ತಿದ್ದು, ಹಗರಣದಲ್ಲಿ ಪೊಲೀಸರು ತಪ್ಪೆಸಗಿರುವುದು ಸಾಬೀತಾದರೆ ತಪ್ಪಿತಸ್ಥ ಪೊಲೀಸರನ್ನು ಬಂಧಿಸಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್‍ಕುಮಾರ್ ಈ ಸಂಜೆಗೆ ತಿಳಿಸಿದ್ದಾರೆ.

ಹಿನ್ನೆಲೆ:

ಕಳೆದ ನವೆಂಬರ್ 25ರಂದು ಶೇಷಾದ್ರಿಪುರಂ ಸಮೀಪದ ಮಾಧವ ನಗರದ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಹಳೆ ನೋಟನ್ನು ವೈಟ್ ಅಂಡ್ ಬ್ಲಾಕ್ ದಂಧೆಯಲ್ಲಿ ಹೊಸ ನೋಟಿಗೆ ಬದಲಾಯಿಸಿಕೊಳ್ಳಲು ಒಂದು ಕೋಟಿ ಹಣದೊಂದಿಗೆ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಮೂರ್ನಾಲ್ಕು ಮಂದಿ ಅವರನ್ನು ಅಡ್ಡಗಟ್ಟಿ ಒಂದು ಬಾರಿ ನಾವು ಶೇಷಾದ್ರಿಪುರಂ ಪೊಲೀಸರು ಎಂದು, ಮತ್ತೊಂದು ಬಾರಿ ಸಿಸಿಬಿ ಪೊಲೀಸರು ಎಂದು ಹೇಳಿಕೆ ನೀಡಿ ಅವರ ಬಳಿ ಇದ್ದ ಒಂದು ಕೋಟಿ ಹಳೆ ನೋಟು ಲೂಟಿ ಮಾಡಿ ಪರಾರಿಯಾಗಿದ್ದರು.

ಹಣ ಕಳೆದುಕೊಂಡ ವ್ಯಕ್ತಿ ಈ ಕುರಿತಂತೆ ಶೇಷಾದ್ರಿಪುರಂ ಪೊಲೀಸರಿಗೆ ದೂರು ನೀಡಲು ಮುಂದಾದಾಗ ಅಲ್ಲಿನ ಸಿಬ್ಬಂದಿ ಪ್ರಕರಣ ನಡೆದ ಸ್ಥಳ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದ್ದರು. ಮತ್ತೆ ಆ ವ್ಯಕ್ತಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ದೂರುದಾರ ನೀಡಿದ ಕಾರಿನ ನಂಬರ್ ಬಗ್ಗೆ ತನಿಖೆ ಕೈಗೊಂಡಾಗ ಆ ಕಾರು ಸಿಸಿಬಿ ಪೊಲೀಸರು ಬಳಸಿದ್ದು ಎಂಬುದು ಗೊತ್ತಾಯಿತು.  ಹಣ ಅಪಹರಿಸಿದ ಪ್ರಕರಣದಲ್ಲಿ ಸಿಸಿಬಿಯ ಒಬ್ಬ ಎಎಸ್‍ಐ ಹಾಗೂ ಇಬ್ಬರು ಹೆಡ್ ಕಾನ್ಸ್‍ಟೆಬಲ್‍ಗಳು ಭಾಗಿಯಾಗಿರುವುದು ಇಲ್ಲಿವರೆಗಿನ ತನಿಖೆಯಿಂದ ಗೊತ್ತಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.  ಕೋಟಿ ಹಣ ಲೂಟಿ ಮಾಡಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರೇ ಭಾಗಿಯಾಗಿರುವುದು ಪೊಲೀಸ್ ಇಲಾಖೆಗೆ ಮುಜುಗರ ಉಂಟುಮಾಡಿದ್ದು, ಇಡೀ ಪ್ರಕರಣದ ತನಿಖೆ ನಡೆಸುವ ಹೊಣೆ ಡಿಸಿಪಿ ಚಂದ್ರಗುಪ್ತ ಅವರ ಹೆಗಲಿಗೆ ಬಂದಿದೆ.

ಅಧಿಕಾರಿಗಳು ಭಾಗಿ ಸಾಧ್ಯತೆ :

ಬೆಂಗಳೂರು, ಡಿ.1- ಸುಮಾರು ಒಂದು ಕೋಟಿ ರೂ. ಬ್ಲಾಕ್ ಆ್ಯಂಡ್ ವೈಟ್ ದಂಧೆಯಲ್ಲಿ ಕಾನ್‍ಸ್ಟೇಬಲ್‍ಗಳಲ್ಲದೆ ಅಧಿಕಾರಿಗಳು ಭಾಗಿಯಾಗಿರುವ ಶಂಕೆಯಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಶೇಷಾದ್ರಿಪುರಂ ಸಮೀಪದ ಮಾದವನಗರ ರೈಲ್ವೆ ಪ್ಯಾರ್ಲರ್ ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಂದ ಹಳೇ ನೋಟನ್ನು ವೈಟ್ ಆ್ಯಂಡ್ ಬ್ಲಾಕ್ ದಂಧೆಯಲ್ಲಿ ಹೊಸನೋಟಿಗೆ ಬದಲಾಯಿಸಿಕೊಳ್ಳುವ ಸಂದರ್ಭದಲ್ಲಿ ಪಿಎಸ್‍ಐ

Facebook Comments

Sri Raghav

Admin