ಚೀನಾಗೆ ಸೆಡ್ಡು ಹೊಡದ ಭಾರತ : 6 ಆಕ್ರಮಣಕಾರಿ ಅಣ್ವಸ್ತ್ರ ಜಲಾಂತರ್ಗಾಮಿಗಳ ನಿರ್ಮಾಣ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

India--023

ನವದೆಹಲಿ, ಡಿ.2- ಇಂಡೋ ಪೆಸಿಫಿಕ್ ಪ್ರಾಂತ್ಯದಲ್ಲಿ ಚೀನಾದ ಸೇನಾ ಚಟುವಟಿಕೆಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪ್ರತ್ಯುತ್ತರ ನೀಡಲು ಭಾರತವು ಆರು ಆಕ್ರಮಣಕಾರಿ ಅತ್ಯಾಧುನಿಕ ಅಣ್ವಸ್ತ್ರ ಜಲಾಂತರ್ಗಾಮಿ (ಸಬ್‍ಮೆರಿನ್)ಗಳ ನಿರ್ಮಾಣ ಕಾರ್ಯ ಆರಂಭಿಸಿದೆ.ಚೀನಾಗೆ ತಿರುಗೇಟು ನೀಡುವುದರ ಜತೆಗೆ ಭಾರತದ ನೌಕಾದಳದ ಸಮಗ್ರ ದಾಳಿ ಸಾಮಥ್ರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಅಟ್ಯಾಕ್ ಸಬ್‍ಮೆರಿನ್‍ಗಳು ಪ್ರಮುಖ ಪಾತ್ರ ವಹಿಸಲಿವೆ.

ಅಣ್ವಸ್ತ್ರಗಳನ್ನು ಹೊಂದಿರುವ ಅತ್ಯಂತ ನಿಖರ ಆಕ್ರಮಣಕಾರಿ ಆರು ಜಲಾಂತರ್ಗಾಮಿಗಳ ನಿರ್ಮಾಣ ಕಾರ್ಯವನ್ನು ಭಾರತ ಆರಂಭಿಸಿದೆ. ಇದು ನೌಕಾದಳದ ಶಸ್ತ್ರಾಸ್ತ್ರಗಳ ಬತ್ತಳಿಕೆಗೆ ಮತ್ತೊಂದು ಅತ್ಯಾಧುನಿಕ ಅಸ್ತ್ರವಾಗಲಿದೆ ಎಂದು ಅಡ್ಮಿರಲ್ ಸುನಿಲ್ ಲಂಬಾ ತಿಳಿಸಿದ್ದಾರೆ. ಈ ಜಲಾಂತರ್ಗಾಮಿಗಳನ್ನು ವಿಶೇಷವಾಗಿ ಇಂಡೋ ಪೆಸಿಫಿಕ್ ಪ್ರಾಂತ್ಯದಲ್ಲಿ ಕಣ್ಗಾವಲು ಮತ್ತು ವೈರಿಗಳ ಚಲನ-ವಲನಗಳ ಮೇಲೆ ಕಣ್ಣಿಡಲು ಬಳಸಬಹುದಾಗಿದೆ ಎಂದು ಅವರು ವಿವರಿಸಿದ್ದಾರೆ.

ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕ ನಡುವೆ ಚತುರ್ಭುಜ ಮೈತ್ರಿ ಸ್ಪಷ್ಟ ರೂಪು ಪಡೆಯುತ್ತಿರುವ ಸಂದರ್ಭದಲ್ಲೇ ಇಂಡೋ ಪೆಸಿಫಿಕ್ ವಲಯ ರಕ್ಷಣೆಗಾಗಿ ಈ ಸಬ್‍ಮೆರಿನ್‍ಗಳು ಪ್ರಮುಖ ಪಾತ್ರ ನಿರ್ವಹಿಸಲಿವೆ ಎಂದು ಅಡ್ಮಿರಲ್ ಲಂಬಾ ತಿಳಿಸಿದರು. ಭಾರತ, ಪೆಸಿಫಿಕ್ ಪ್ರಾಂತ್ಯದಲ್ಲಿ ಇತ್ತೀಚೆಗೆ ಚೀನಾದ ನೌಕೆಗಳು ಸೇರಿದಂತೆ ಸೇನಾ ಚಟುವಟಿಕೆಗಳು ತೀವ್ರಗೊಂಡು ಜಲಗಡಿ ಪ್ರದೇಶಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈ ಬಗ್ಗೆ ಈ ನಾಲ್ಕು ರಾಷ್ಟ್ರಗಳು ಇತ್ತೀಚೆಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದವು. ಈ ಆತಂಕಕಾರಿ ಸನ್ನಿವೇಶದ ನಡುವೆಯೇ ಭಾರತ ಆರು ನ್ಯೂಕ್ಲಿಯರ್ ಅಟ್ಯಾಕ್ ಸಬ್‍ಮೆರಿನ್‍ಗಳ ತಯಾರಿಕೆಗೆ ಮುಂದಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಇದಲ್ಲದೆ, ಈ ಜಲಾಂತರ್ಗಾಮಿಗಳನ್ನು ಕರಾವಳಿ ರಕ್ಷಣೆ, ಕಳ್ಳ ಸಾಗಾಣಿಕೆ ನಿಯಂತ್ರಣ, ಭಯೋತ್ಪಾದಕ ಚಟುವಟಿಕೆಗಳ ನಿಗ್ರಹ ಹಾಗೂ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ನೆರವು ನೀಡಿಕೆ ಇತ್ಯಾದಿ ಕಾರ್ಯಾಚರಣೆಗಳಿಗೆ ಬಳಸಬಹುದಾಗಿದೆ.

Facebook Comments

Sri Raghav

Admin