ಭಯೋತ್ಪಾದನೆ ನಿಗ್ರಹಕ್ಕೆ ರಾಷ್ಟ್ರಗಳ ನಡುವೆ ಗುಪ್ತಚರ ಮಾಹಿತಿ ವಿನಿಮಯ ಅಗತ್ಯ : ಸುಷ್ಮಾ

ಈ ಸುದ್ದಿಯನ್ನು ಶೇರ್ ಮಾಡಿ

Sushma--01

ಸೋಚಿ(ರಷ್ಯಾ), ಡಿ.2-ವಿಶ್ವದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಚಟುವಟಿಕೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಉಗ್ರರ ದಮನಕ್ಕಾಗಿ ಭದ್ರತಾ ಸಮೂಹ ಸದಸ್ಯ ರಾಷ್ಟ್ರಗಳ ನಡುವೆ ಪರಸ್ಪರ ಗುಪ್ತಚರ ಮಾಹಿತಿ ವಿನಿಮಯದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.  ರಷ್ಯಾದ ಸೋಚಿಯಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (ಎಸ್‍ಸಿಒ) ಶೃಂಗಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ರೀತಿಯ ಭಯೋತ್ಪಾದನೆ ಕೃತ್ಯಗಳು ಖಂಡನಾರ್ಹ. ಇದನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಭಯೋತ್ಪಾದನೆ ಯಾವುದೇ ಧರ್ಮ, ಜನಾಂಗ, ರಾಷ್ಟ್ರೀಯತೆ ಅಥವಾ ನಾಗರಿಕತೆ ಜೊತೆ ಸಂಬಂಧ ಕಲ್ಪಿಸುವಂತಿಲ್ಲ. ಅದು ಇಡೀ ಮನುಕುಲ ವಿರುದ್ಧದ ದೊಡ್ಡ ಅಪರಾಧ. ಆದ್ದರಿಂದ ಎಲ್ಲ ದೇಶಗಳು ಗುಪ್ತಚರ ವರದಿ, ಕಾನೂನು ಜಾರಿ, ತಂತ್ರಜ್ಞಾನಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಈ ಪಿಡುಗನ್ನು ನಿವಾರಿಸಬೇಕು ಎಂದು ಅವರು ಸಭೆಯಲ್ಲಿ ಮನವಿ ಮಾಡಿದರು. ಎನ್‍ಸಿಒ ಚೌಕಟ್ಟಿನಲ್ಲಿ ಸಹಕಾರವನ್ನು ಮತ್ತಷ್ಟು ದೃಢಗೊಳಿಸಲು ಭಾರತ ಬದ್ಧವಾಗಿದೆ. ಸುಸ್ಥಿರ ಭದ್ರತೆ ಹಾಗೂ ಸಹಕಾರದ ಸಮಗ್ರತೆಗಾಗಿ ಜಂಟಿಯಾಗಿ ಕಾರ್ಯನಿರ್ವಸಲು ಸಿದ್ಧವಿರುವುದಾಗಿ ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು.

Facebook Comments

Sri Raghav

Admin