ಭಾರತವನ್ನು ಕೋರ್ಟಿಗೆಳೆದ ಜಪಾನಿನ ನಿಸ್ಸಾನ್ ಮೋಟಾರ್ಸ್ ಸಂಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

Nissan--02

ನವದೆಹಲಿ, ಡಿ.2-ಪಾವತಿಯಾಗದ ಬಾಕಿ ಮೊತ್ತದ ವಿವಾದಕ್ಕೆ ಸಂಬಂಧಿಸಿದಂತೆ 770 ದಶಲಕ್ಷ ಡಾಲರ್ ಪರಿಹಾರ ಕೋರಿ ಜಪಾನಿನ ಅಗ್ರಮಾನ್ಯ ಆಟೋಮೊಬೈಲ್ ಸಂಸ್ಥೆ ನಿಸ್ಸಾನ್ ಮೋಟಾರ್ಸ್ ಭಾರತವನ್ನು ನ್ಯಾಯಾಲಯಕ್ಕೆ ಎಳೆದಿದೆ. ಪಾವತಿಯಾಗದ ಸರ್ಕಾರಿ ಪ್ರೊತ್ಸಾಹ ಧನದ ತಕರಾರಿನಲ್ಲಿ ನಿಸ್ಸಾನ್ ಕೇಂದ್ರ ಸರ್ಕಾರ ವಿರುದ್ಧ ಅಂತಾರಾಷ್ಟ್ರೀಯ ದಾವೆ ಹೂಡಿದೆ.

ಈ ಸಂಬಂಧ ನಿಸ್ಸಾನ್ ಕಳೆದ ವರ್ಷವೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾನೂನು ನೋಟಿಸ್ ರವಾನಿಸಿತ್ತು. ಕಾರು ನಿರ್ಮಾಣ ಘಟಕ ಆರಂಭಿಸಲು 2008ರಲ್ಲಿ ಏರ್ಪಟ್ಟ ಒಪ್ಪಂದದ ಪ್ರಕಾರ ತಮಿಳುನಾಡು ಸರ್ಕಾರ ಪ್ರೊತ್ಸಾಹ ನೀಡಲು ವಿಫಲವಾಗಿದೆ. 2015ರಲ್ಲಿ ಬಾಕಿ ಉಳಿದಿರುವ ಬಾಕಿ ಮೊತ್ತವನ್ನು ಪಾವತಿಸುವಂತೆ ಸಂಸ್ಥೆಯು ರಾಜ್ಯದ ಅಧಿಕಾರಿಗಳಿಗೆ ಪುನರಾವರ್ತಿತ ಮನವಿಗಳನ್ನು ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ನಿಸ್ಸಾನ್ ಆರೋಪಿಸಿದೆ.

ಸಂಸ್ಥೆಯ ಮುಖ್ಯಸ್ಥ ಕಾರ್ಲೋಸ್ ಗೋಸ್ಟ್ ಅವರೂ ಕೂಡ ಈ ಸಂಬಂಧ ಪ್ರಧಾನಿ ಮೋದಿ ಅವರಿಗೆ ಈ ಬಗ್ಗೆ ದೂರು ನೀಡಿ ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಲೀಗಲ್ ನೋಟಿಸ್‍ನಲ್ಲಿ ತಿಳಿಸಲಾಗಿದೆ.

Facebook Comments

Sri Raghav

Admin