ಮಾಧ್ಯಮ ಪ್ರತಿನಿಧಿ ಮೇಲೆ ಹಲ್ಲೆ ಮಾಡಿದ ತುಮಕೂರು ಪಾಲಿಕೆ ಸದಸ್ಯ

ಈ ಸುದ್ದಿಯನ್ನು ಶೇರ್ ಮಾಡಿ

Tumakuru--02

ತುಮಕೂರು, ಡಿ.2- ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಟಿ ನಡೆಯುತ್ತಿದ್ದಾಗ ಮಾಧ್ಯಮ ಪ್ರತಿನಿಧಿ ಮೇಲೆ ಬಿಜೆಪಿ ಕಾರ್ಪೊರೇಟರ್ ಏಕಾಏಕಿ ಹಲ್ಲೆ ನಡೆಸಿದ ಘಟನೆ ನಡೆಯಿತು. ನಗರದ ಖಾಸಗಿ ಹೊಟೇಲ್‍ನಲ್ಲಿ ಇಂದು ಬೆಳಗ್ಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಜ್ಯೋತಿ ಗಣೇಶ್ ಸುದ್ದಿಗೋಷ್ಠಿ ಹಮ್ಮಿಕೊಂಡಿದ್ದರು. ಅವರು ಮಾತನಾಡುತ್ತಿದ್ದ ಸಂದರ್ಭದಲ್ಲೇ ಖಾಸಗಿ ವಾಹಿನಿಯ ವರದಿಗಾರ ವಾಗೀಶ್ ಎಂಬುವವರ ಮೇಲೆ ಕ್ಷುಲ್ಲಕ ವಿಚಾರ ತೆಗೆದು ಏಕಾಏಕಿ ತುಮಕೂರು ನಗರ ಪಾಲಿಕೆ ಬಿಜೆಪಿ ಸದಸ್ಯ ಹೆಬ್ಬಾಕದ ರವಿ ಹಾಗೂ ಕೆಜೆಪಿ ಸದಸ್ಯ ಬಾವಿಕಟ್ಟೆ ನಾಗಣ್ಣ ಹಲ್ಲೆ ನಡೆಸಿದರು.ಈ ಹಿಂದೆ ಮತ್ತೊಂದು ಖಾಸಗಿ ವಾಹಿನಿಯ ವರದಿಗಾರರೊಬ್ಬರನ್ನು ಹೆಬ್ಬಾಕದ ರವಿ , ಬಾವಿಕಟ್ಟೆ ನಾಗಣ್ಣ ಮತ್ತಿತರರು ಕಿತಾಪತಿ ಮಾಡಿ ಕೆಲಸದಿಂದ ತೆಗೆಸಿ ಹಾಕಿದ್ದರು.

ಸುದ್ದಿಯೊಂದರ ವಿಚಾರವಾಗಿ ವಾಗೀಶ್‍ಗೆ ಮಠದವರು ಕಪಾಳ ಮೋಕ್ಷ ಮಾಡಿದ್ದಾರೆಂದು ಇವರ ಗುಂಪು ಸುಳ್ಳು ಸುದ್ದಿ ಹರಡಿದ್ದರು. ಇಂದು ಪತ್ರಿಕಾಗೋಷ್ಠಿ ನಡೆಯುತ್ತಿದ್ದಾಗ ಈ ವಿಚಾರವನ್ನು ವಾಗೀಶ್ ಜತೆ ಯಾರೂ ಪ್ರಶ್ನಿಸುತ್ತಿದ್ದರು. ಇದನ್ನು ಕೇಳಿಸಿಕೊಂಡ ರವಿ ಹಾಗೂ ನಾಗಣ್ಣ ಮತ್ತು ಮಿತ್ರರು ಆಕ್ರೋಶಗೊಂಡು ಏಕಾಏಕಿ ವಾಗೀಶ್‍ನತ್ತ ನುಗ್ಗಿ ಎಳೆದಾಡಿ ಹಲ್ಲೆ ಮಾಡಿದರು. ಈ ಸಂಬಂಧ ಪೊಲೀಸರಿಗೆ ದೂರು ಕೊಡುವುದಾಗಿ ವಾಗೀಶ್ ತಿಳಿಸಿದ್ದಾರೆ.

Facebook Comments

Sri Raghav

Admin