ಲಂಕಾ ನೌಕಾಪಡೆಯಿಂದ ತಮಿಳುನಾಡಿನ 20 ಬೆಸ್ತರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Tamil-Fishermen-Srilanka

ರಾಮೇಶ್ವರಂ(ತಮಿಳುನಾಡು), ಡಿ.2-ದ್ವೀಪರಾಷ್ಟ್ರ ಶ್ರೀಲಂಕಾ ಕರಾವಳಿಗೆ ಸಮೀಪದಲ್ಲಿರುವ ನೆಡುಂತೀವು ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದರೆನ್ನಲಾದ ತಮಿಳುನಾಡಿನ 20 ಮೀನುಗಾರರನ್ನು ನೌಕಾಪಡೆ ಇಂದು ಬಂಧಿಸಿದೆ. ನಾಗಪಟ್ಟಣಂನ ಬೆಸ್ತರು ಶ್ರೀಲಂಕಾ ಜಲಗಡಿ ಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಅವರನ್ನು ಬಂಧಿಸಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಗಂಗಾಧರ್ ತಿಳಿಸಿದ್ದಾರೆ.

ಮೀನುಗಾರರ ಎರಡು ದೋಣಿಗಳನ್ನು ವಶಕ್ಕೆ ಪಡೆದಿರುವ ಲಂಕಾ ನೌಕಾಪಡೆ ಸಿಬ್ಬಂದಿ ಬಂಧಿತರನ್ನು ಪರುತ್ತಿತುರೈಗೆ ಕರೆದೊಯ್ದಿದ್ದಾರೆ. ನ.19ರಂದು ಕಚ್ಚತೀವು ಪಾಲ್ಕ್ ಜಲಸಂಧಿ ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದ ತಮಿಳುನಾಡಿನ ಎಂಟು ಬೆಸ್ತರನ್ನು ಲಂಕಾ ನೌಕಾ ಪಡೆ ಬಂಧಿಸಿತ್ತು.

Facebook Comments

Sri Raghav

Admin