ಲಂಕಾ ವಿರುದ್ಧ 3ನೇ ಟೆಸ್ಟ್ : ದೊಡ್ಡ ಮೊತ್ತದತ್ತ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

Cri-01

ನವದೆಹಲಿ,ಡಿ.2-ಇಂದಿಲ್ಲಿ ಆರಂಭಗೊಂಡ ಶ್ರೀಲಂಕಾ ವಿರುದ್ಧದ ಅಂತಿಮ ಕ್ರಿಕೆಟ್ ಟೆಸ್ಟ್‍ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಆರಂಭಿಕ ಆಘಾತ ಅನುಭವಿಸಿದರೂ ನಾಯಕ ವಿರಾಟ್ ಕೊಹ್ಲಿ ಮತ್ತು ಮುರುಳಿ ವಿಜಯ್ ಅವರ ಸಮಯೋಚಿತ ಆಟದ ನೆರವಿನಿಂದ ದೊಡ್ಡ ಮೊತ್ತ ಕಲೆ ಹಾಕುವತ್ತ ಅಡಿಪಾಯ ಹಾಕಿದೆ.  ಫಿರೋಶಕೋಟ್ಲ ಮೈದಾನದಲ್ಲಿ ಟಾಸ್ ಗೆದ್ದ ನಂತರ ಸರಣಿ ಗೆಲ್ಲುವ ಉತ್ಸಾಹದಲ್ಲೇ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಮುರುಳಿ ವಿಜಯ್ ಮತ್ತು ಶಿಖರ್ ಧವನ್ ಎಚ್ಚರಿಕೆಯ ಆಟಕ್ಕೆ ಮುಂದಾದರು.

ತಿಷಾರ ಅವರ ನಾಯಕತ್ವದಲ್ಲಿ ಕಣಕ್ಕಿಳಿದಿರುವ ಲಂಕಾ ಪಡೆ ಇಂದು ಸ್ಪಿನರ್ ದಾಳಿಗೆ ಹೆಚ್ಚು ಒತ್ತು ನೀಡಿದ ಹಿನ್ನೆಲೆಯಲ್ಲಿ ಭಾರತ ತಂಡದ ಮೊತ್ತ 42 ರನ್‍ಗಳಾಗಿದ್ದಾಗ ಪರೇರ ಅವರ ಬೌಲಿಂಗ್‍ನಲ್ಲಿ ಶಿಖರ್ ಧವನ್(24) ಔಟಾಗುವ ಮೂಲಕ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ನಂತರ ಬಂದ ಚೇತೇಶ್ವರ ಪೂಜಾರ ಮತ್ತು ಮುರುಳಿ ವಿಜಯ್ ಜೋಡಿ ತಂಡವನ್ನು ಅಪಾಯದಿಂದ ಪಾರು ಮಾಡಲು ಪ್ರಯತ್ನಿಸಿದರು. ಆದರೆ 21 ಓವರ್‍ನಲ್ಲಿ ಬೌಲ್ ಮಾಡಲು ಬಂದ ಸಮರವಿಕ್ರಮ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು.

ಬಹುಬೇಗನೆ ಎರಡು ವಿಕೆಟ್ ಉರುಳಿದ ನಂತರ ಮೈದಾನಕ್ಕಿಳಿದ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದರು. ಶ್ರೀಲಂಕಾ ಬೌಲರ್‍ಗಳನ್ನು ದಂಡಿಸಿ ನೋಡು ನೋಡುತ್ತಿದ್ದಂತೆ ಅರ್ಧ ಶತಕ ಸಿಡಿಸಿ ಮುನುಗ್ಗಿದರು. ಇದರಿಂದ ಉತ್ತೇಜಿತರಾದ ಮುರುಳಿ ವಿಜಯ್ ಕೂಡ ತಮ್ಮ ಎಂದಿನ ಜಾಣ್ಮೆಯ ಆಟದ ಮೂಲಕ ಮತ್ತೆ ಅರ್ಧ ಶತಕ ಸಿಡಿಸಿ ಭಾರತ ತಂಡಕ್ಕೆ ಉತ್ತಮ ರನ್ ಕಲೆ ಹಾಕುವಲ್ಲಿ ತಮ್ಮದೇ ಆದ ಕಾಣಿಕೆ ನೀಡಿದರು. ಕೊಹ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಬೌಂಡರಿಗಳನ್ನು ಸಿಡಿಸಿದರೆ, ವಿಜಯ್ ತಾಳ್ಮೆಯ ಆಟ ನಡೆಸಿದರು. ಕೇವಲ ದಿನದಾಟದ 45ನೇ ಓವರ್‍ನಲ್ಲಿ ಭಾರತ 200ರ ಗಡಿ ದಾಟಿತು.

Facebook Comments

Sri Raghav

Admin