ಲಕ್ಷದ್ವೀಪಕ್ಕೆ ಅಪ್ಪಳಿಸಿದ ವಿನಾಶಕಾರಿ ಒಖಿ ಚಂಡಮಾರುತ

ಈ ಸುದ್ದಿಯನ್ನು ಶೇರ್ ಮಾಡಿ

Oki--00002

ಕವರಟ್ಟಿ/ತಿರುವನಂತಪುರಂ, ಡಿ.2-ತಮಿಳುನಾಡು ಮತ್ತು ಕೇರಳದಲ್ಲಿ ಸಾವು-ನೋವು, ನೌಕೆಗಳ ಮುಳುಗಡೆ ಮತ್ತು ಅಪಾರ ಹಾನಿಗೆ ಕಾರಣವಾದ ವಿನಾಶಕಾರಿ ಒಖಿ ಚಂಡಮಾರುತ ನಿರೀಕ್ಷೆಯಂತೆ ಇಂದು ಬೆಳಗ್ಗೆ ಲಕ್ಷದ್ವೀಪಕ್ಕೆ ಅಪ್ಪಳಿಸಿದೆ. ಭಾರೀ ಬಿರುಗಾಳಿ ಮತ್ತು ಧಾರಾಕಾರ ಮಳೆಯಿಂದಾಗಿ ದ್ವೀಪ ಪ್ರದೇಶ ತತ್ತರಿಸಿದೆ. ಸೈಕ್ಲೋನ್ ಹಾವಳಿಯಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಒಖಿ ರೌದ್ರಾವತಾರಕ್ಕೆ ಅನೇಕ ಮನೆಗಳಿಗೆ ಹಾನಿಯಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಹಲವಾರು ತೆಂಗಿನಮರಗಳು, ವಿದ್ಯುತ್ ಕಂಬಗಳು ಬುಡಮೇಲಾಗಿವೆ. ಮುಂದಿನ 24 ಗಂಟೆಗಳ ಕಾಲ ಈ ಪ್ರದೇಶದಲ್ಲಿ ಬಿರುಗಾಳಿಯಿಂದ ಕೂಡಿದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಎರಡೂ ರಾಜ್ಯಗಳಲ್ಲಿ ಭಾರೀ ಮಳೆಯಿಂದಾಗಿ ಜಲಪ್ರದೇಶಗಳಲ್ಲಿ ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಕೆಯಾಗಿದೆ. ಕಲ್‍ಪೆನಿ ದ್ವೀಪದಲ್ಲಿ ಇಂದು ಮುಂಜಾನೆ ನೀರಿನ ಮಟ್ಟ ಹೆಚ್ಚಳದಿಂದ ಅನೇಕ ದೋಣಿಗಳಿಗೆ ಹಾನಿಯಾಗಿವೆ.

ತಮಿಳುನಾಡು ಮತ್ತು ಕೇರಳದಿಂದ 12 ಮೀನುಗಾರಿಕೆ ದೋಣಿಗಳಲ್ಲಿ ಸಮುದ್ರಕ್ಕೆ ತೆರಳಿ ಅಪಾಯದಲ್ಲಿ ಸಿಲುಕಿರುವ ಅನೇಕ ಬೆಸ್ತರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ. ನಿನ್ನೆ ಸಮುದ್ರ ಮಧ್ಯದಲ್ಲಿ ಅಪಾಯದಲ್ಲಿ ಸಿಲುಕಿದ್ದ 218 ಮೀನುಗಾರರನ್ನು ರಕ್ಷಿಸಲಾಗಿದೆ.

Facebook Comments

Sri Raghav

Admin