7 ಗಂಟೆಯಾದರೂ ಹಾರದ ಏರ್‍ಇಂಡಿಯಾ ವಿಮಾನ , ಪ್ರಯಾಣಿಕರರಿಂದ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Air-India--03

ಮುಂಬೈ, ಡಿ.2-ಪೈಲೆಟ್ ಅಲಭ್ಯತೆಯಿಂದಾಗಿ ವಿಮಾನ ಹಾರಾಟ ಏಳು ಗಂಟೆಗಳ ಕಾಲ ವಿಳಂಬವಾಗಿದ್ದರಿಂದ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇಂದು ನಡೆದಿದೆ. ಅಹಮದಾಬಾದ್‍ಗೆ ತೆರಳಬೇಕಿದ್ದ ಏರ್ ಇಂಡಿಯಾದ ಎಐ-031 ವಿಮಾನವು ಇಂದು ಮುಂಜಾನೆ 1.35ಕ್ಕೆ ಹಾರಬೇಕಿತ್ತು. ಆದರೆ ಸುಮಾರು ಏಳು ಗಂಟೆಗಳು ತಡವಾಗಿ ಅಂದರೆ ಬೆಳಗ್ಗೆ 8.20ಕ್ಕೆ ಮೇಲೇರಿತು.

ಬೋಯಿಂಗ್ 777 ವಿಮಾನದಲ್ಲಿ 200 ಮಂದಿ ಪ್ರಯಾಣಿಸುವವರಿದ್ದರು. ಆರಂಭದಲ್ಲಿ ಒಂದು ಗಂಟೆ ವಿಳಂಬವಾಗಿತ್ತು. ಆದರೆ ವಿಮಾನವನ್ನು ಚಾಲನೆ ಮಾಡಲು ಪೈಲೆಟ್ ಇಲ್ಲದ ಕಾರಣ ಮತ್ತಷ್ಟು ತಡವಾಯಿತು. ಮಧ್ಯರಾತ್ರಿಯಿಂದ ಮುಂಜಾನೆಯಾದರೂ ವಿಮಾನ ಮೇಲೇರುವ ಲಕ್ಷಣಗಳು ಗೋಚರಿಸದ ಕಾರಣ ಕುಪಿತರಾದ ಪ್ರಯಾಣಿಕರು ಬೋರ್ಡಿಂಗ್ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದರು. ಅಲ್ಲದೇ ಇತರ ವಿಮಾನಗಳ ಹಾರಾಟಕ್ಕೂ ಅಡ್ಡಿ ಮಾಡಿದರು. ಇದರಿಂದ ಅಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು.

ಚಾಲನಾ ಕರ್ತವ್ಯ ಸಮಯ ಇತಿಮಿತಿ(ಎಫ್‍ಡಿಟಿಎಲ್) ಗೊಂದಲ ಮತ್ತು ಸಿಬ್ಬಂದಿ ಕೊರತೆಯಿಂದ ವಿಮಾನ ಹಾರಾಟದಲ್ಲಿ ವಿಳಂಬವಾಯಿತು ಎಂದು ಏರ್ ಇಂಡಿಯಾ ವಕ್ತಾರರು ಹೇಳಿದ್ದಾರೆ. ಪೈಲೆಟ್‍ಗಳ ಕರ್ತವ್ಯ ವೇಳೆಯನ್ನು ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು(ಡಿಜಿಸಿಎ) ನಿಗದಿಗೊಳಿಸಲಿದ್ದು, ತಮ್ಮ ನಿರ್ದಿಷ್ಟ ಹಾರಾಟ ಅವಧಿಗೆ ಆಚೆ ಅವರು ವಿಮಾನವನ್ನು ಚಾಲನೆ ಮಾಡುವಂತಿಲ್ಲ.

Facebook Comments

Sri Raghav

Admin