ಈ ವರ್ಷ 724 ಬಾರಿ ಕದನವಿರಾಮ ಉಲ್ಲಂಘಿಸಿದ ಪಾಕಿ ಪಡೆಗಳು

ಈ ಸುದ್ದಿಯನ್ನು ಶೇರ್ ಮಾಡಿ

Firing--0141

ನವದೆಹಲಿ, ಡಿ.3-ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ(ಐಬಿ) ಮತ್ತು ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಉದ್ದಕ್ಕೂ ಪಾಕಿಸ್ತಾನ ಸೇನಾಪಡೆ ಈ ವರ್ಷ 724 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಇದು ಕಳೆದ ಏಳು ವರ್ಷಗಳಲ್ಲೇ ಅತಿ ಹೆಚ್ಚು ಎಂಬ ಸಂಗತಿಯೂ ಬೆಳಕಿಗೆ ಬಂದಿದೆ. ಈ ವರ್ಷ ಅಕ್ಟೋಬರ್‍ವರೆಗೆ ಐಬಿ ಮತ್ತು ಎಲ್‍ಒಸಿ ಬಳಿ ಪಾಕಿಸ್ತಾನಿ ಪಡೆಗಳು 724 ಬಾರಿ ಯುದ್ಧ ವಿರಾಮ ಉಲ್ಲಂಘಿಸಿವೆ. 2016ರಲ್ಲಿ 449 ಬಾರಿ ಯುದ್ಧ ವಿಶ್ರಾಂತಿ ನಿಯಮವನ್ನು ಗಾಳಿಗೆ ತೂರಲಾಗಿತ್ತು ಎಂಬ ಮಾಹಿತಿಯನ್ನು ಕೇಂದ್ರ ಗೃಹ ಸಚಿವಾಲಯ ನೀಡಿದೆ.

ಕಾಶ್ಮೀರ ಗಡಿಯಲ್ಲಿ ಈ ವರ್ಷ ಅಕ್ಟೋಬರ್‍ವರೆಗೆ ಪಾಕ್ ಯೋಧರು ಕದನ ವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ದಾಳಿಯಲ್ಲಿ 12 ನಾಗರಿಕರು ಮತ್ತು 17 ಯೋಧರು ಮೃತಪಟ್ಟಿದ್ದಾರೆ ಎಂದು ಅಂಕಿ-ಅಂಶಗಳನ್ನು ಉಲ್ಲಂಘಿಸಿ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾಕಿಸ್ತಾನ ಯೋಧರ ಗುಂಡಿನ ದಾಳಿಯಲ್ಲಿ ಒಟ್ಟು 79 ನಾಗರಿಕರು ಮತ್ತು 67 ಭದ್ರತಾ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ.

2016ರಲ್ಲಿ ಪಾಕಿಸ್ತಾನದಿಂದ 449 ಕದನ ವಿರಾಮ ಉಲ್ಲಂಘನೆಗಳಲ್ಲಿ 13 ನಾಗರಿಕರು ಮತ್ತು 13 ಭದ್ರತಾಪಡೆ ಯೋಧರು ಮೃತಪಟ್ಟಿದ್ದರು. ಪಾಕಿಸ್ತಾನವು 2015ರಲ್ಲಿ 405 ಬಾರಿ, 2013ರಲ್ಲಿ 347, 2012ರಲ್ಲಿ 114, 2011ರಲ್ಲಿ 62 ಹಾಗೂ 2010ರಲ್ಲಿ 70 ಸಲ ಯುದ್ಧ ವಿರಾಮಗಳನ್ನು ಉಲ್ಲಂಘಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಅಂತಾರಾಷ್ಟ್ರೀಯ ಗಡಿ, ಗಡಿ ನಿಯಂತ್ರಣ ರೇಖೆ, ಹಾಗೂ ವಾಸ್ತವ ಹತೋಟಿ ರೇಖೆ ಉದ್ದಕ್ಕೂ 2003ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕದನವಿರಾಮ ಜಾರಿಗೆ ಬಂದಿದೆ.  ಭಾರತವು ಪಾಕಿಸ್ತಾನದೊಂದಿಗೆ 3,323 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿದ್ದು, ಇದರಲ್ಲಿ 221 ಕಿ.ಮೀ.ಅಂತಾರಾಷ್ಟ್ರೀಯ ಗಡಿ ಮತ್ತು 740 ಕಿ.ಮೀ. ಗಡಿ ನಿಯಂತ್ರಣ ರೇಖೆ ಜಮ್ಮು ಮತ್ತು ಕಾಶ್ಮೀರದಲ್ಲಿದೆ.

Facebook Comments

Sri Raghav

Admin