ಕೊಟ್ಟ ಭರವಸೆಯಂತೆ ಮನೆ ಕಟ್ಟಿಸಿಕೊಟ್ಟ ಮಾಜಿ ಸಚಿವ ಕಿಮ್ಮನೆ ರತ್ನಾಕರ್

ಈ ಸುದ್ದಿಯನ್ನು ಶೇರ್ ಮಾಡಿ

Kimmanane-Ratnakara

ತೀರ್ಥಹಳ್ಳಿ, ಡಿ.3- ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಕೆರೆಯೊಂದರಲ್ಲಿ ತಾವರೆಹೂ ಕೀಳಲು ಹೋಗಿ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದ ತಾಲ್ಲೂಕಿನ ಬೆಜ್ಜವಳ್ಳಿ ಉದಯ್‍ಪೂಜಾರಿ ಅವರ ಕುಟುಂಬದವರಿಗೆ ಶಾಸಕ ಕಿಮ್ಮನೆ ರತ್ನಾಕರ್ ನೀಡಿದ ಭರವಸೆಯಂತೆ ಮನೆ ಕಟ್ಟಿಸಿಕೊಟ್ಟಿದ್ದಾರೆ. ಆ ಕುಟುಂಬದ ಮನೆಯ ಕನಸನ್ನು ಅವರು ನನಸು ಮಾಡಿದ್ದಾರೆ. ನಿನ್ನ ಬೆಜ್ಜವಳ್ಳಿಯಲ್ಲಿ ನಡೆದು ಗುರುವಂದನೆ ಕಾರ್ಯಕ್ರಮಕ್ಕೂ ಮುನ್ನ ಬೆಳ್ತಂಗಡಿಯ ಶ್ರೀರಾಮ ಕ್ಷೇತ್ರದ ಮಠಾಧೀಶರಾದ ಬ್ರಹ್ಮಾನಂದ ಸ್ವಾಮೀಜಿ ಅವರು ಮನೆಯ ಗೃಹ ಪ್ರವೇಶ ನೆರವೇರಿಸಿದರು. ಉದಯ್‍ಪೂಜಾರಿ ಅವರ ಕುಟುಂಬದ ದುಸ್ಥಿತಿಯನ್ನು ಕಂಡ ಮಮ್ಮಲ ಮರುಗಿದ್ದ ಶಾಸಕ ಕಿಮ್ಮನೆ ರತ್ನಾಕರ್ ಅವರು ತಾವೇ ಮುಂದು ನಿಂತು ಆ ಸಂಸಾರಕ್ಕೆ ಮನೆಯೊಂದನ್ನು ಕಟ್ಟಿಕೊಟ್ಟಿದ್ದರು. ಆ ಕಾರ್ಯಕ್ಕೆ ಹತ್ತಾರು ಸಹೃದಯರು ಕೈಜೋಡಿಸಿದ್ದರು.

ಬೆಜ್ಜವಳ್ಳಿ ಗ್ರಾಪಂ ಅಧ್ಯಕ್ಷ ಹರೀಶ್ ಮತ್ತು ಸಹ್ಯಾದ್ರಿ ಸಂಸ್ಥೆ ಅಧ್ಯಕ್ಷ ಎಚ್.ಎನ್.ವಿಜಯದೇವ್ ಉದಯ್‍ಪೂಜಾರಿ ಅವರ ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತಿಕೊಂಡಿದ್ದಾರೆ. ಬ್ರಹ್ಮಾನಂದ ಸ್ವಾಮೀಜಿಯವರಿಗೆ ಗುರುವಂದನೆ ಕಾರ್ಯಕ್ರಮವನ್ನು ಬಿಲ್ಲವ ಸಂಘದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಏರ್ಪಡಿಸಲಾಗಿತ್ತು. ಇದೇ ವೇಳೆ ಈದ್ ಮೆರವಣಿಗೆ ಕೂಡ ಬೆಜ್ಜವಳ್ಳಿ ವೃತ್ತದವರೆಗೆ ಆಗಮಿಸಿತ್ತು. ಈ ಸಂದರ್ಭದಲ್ಲಿ ಬೆಜ್ಜವಳ್ಳಿಗೆ ಶ್ರೀಗಳು ಆಗಮಿಸಿದಾಗ ಅವರನ್ನು ಮುಸ್ಲಿಂ ಬಾಂಧವರು ಗೌರವದಿಂದ ಬರಮಾಡಿಕೊಂಡರು. ಶ್ರೀಗಳು ಅವರೊಂದಿಗೆ ಸಮಾಲೋಚಿಸಿ ತೋರಿದ ಸಾಮರಸ್ಯಕ್ಕೆ ಅಲ್ಲಿನ ನೂರಾರು ಮಂದಿ ಸಾಕ್ಷಿಯಾದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin