ಗುಂಡಿಟ್ಟು ಹತ್ಯೆ ಬಿಜೆಪಿ ನಾಯಕನ ಹತ್ಯೆ : ನಕ್ಸಲರ ಕೈವಾಡ ಶಂಕೆ

ಈ ಸುದ್ದಿಯನ್ನು ಶೇರ್ ಮಾಡಿ

gun-firingಖುಂಠಿ, ಡಿ.3- ಬಿಜೆಪಿ ನಾಯಕನೊಬ್ಬನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಜಾರ್ಖಂಡ್‍ನ ನಕ್ಸಲ್ ಹಾವಳಿ ಪೀಡಿತ ಖುಂಠಿ ಜಿಲ್ಲೆಯ ಬಾಗ್ಮಾ ಗ್ರಾಮದಲ್ಲಿ ನಡೆದಿದೆ. ಈ ಕಗ್ಗೊಲೆ ಹಿಂದೆ ನಕ್ಸಲರ ಕೈವಾಡ ಇರುವುದಾಗಿ ಶಂಕಿಸಲಾಗಿದೆ. ಬಿಜೆಪಿಯ ಪರಿಶಿಷ್ಟ ಪಂಗಡಗಳ ಜಿಲ್ಲಾ ಕಾರ್ಯದರ್ಶಿ ಮತ್ತು ಸ್ಥಳೀಯ ಪ್ರಭಾವಿ ಮುಖಂಡ ಭೈೈಯ್ಯಾ ರಾಮ ಮುಂಡಾ(38) ಹಂತಕರ ಗುಂಡಿಗೆ ಬಲಿಯಾಗಿದ್ಧಾರೆ.

ಶುಕ್ರವಾರ ರಾತ್ರಿ ಗ್ರಾಮಕ್ಕೆ ನುಗ್ಗಿದ ಗುಂಪೊಂದು ಮುಂಡಾ ಅವರನ್ನು ಮನೆಯಿಂದ ಹೊರೆಗೆ ಎಳೆದು ಗುಂಡು ಹಾರಿಸಿದ್ದಾರೆ ಎಂದು ಗ್ರಾಮಸ್ಥರು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಕಾಶೀನಾಥ ಮಹತೋ ತಿಳಿಸಿದ್ದಾರೆ. ಈ ಘಟನೆಯಲ್ಲಿ ಮುಂಡಾ ಅವರ ತಾಯಿ ಮತ್ತು ಸೋದರ ಸಂಬಂಧಿಗೂ ಗುಂಡೇಟು ತಗುಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹತ್ಯೆಗೆ ನಿಖರ ಕಾರಣಗಳ ಬಗ್ಗೆ ತನಿಖೆ ಮುಂದುವರಿದಿದ್ದು, ತೆರಿಗೆ ವಸೂಲಿಗೆ ಸಂಬಂಧಪಟ್ಟಂತೆ ನಕ್ಸಲರು ಈ ಕೃತ್ಯ ಎಸಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಪತ್ತೆಯಾಗಿದೆ.

Facebook Comments

Sri Raghav

Admin