ಗುಜರಾತ್’ ರಣರಂಗ : 6 ದಿನಗಳಲ್ಲಿ 31 ಸಭೆ, ರ‍್ಯಾಲಿಗಳಲ್ಲಿ ಮೋದಿ ಭಾಷಣ

ಈ ಸುದ್ದಿಯನ್ನು ಶೇರ್ ಮಾಡಿ

Modi--2

ಗಾಂಧಿನಗರ, ಡಿ.3- ಇಡೀ ದೇಶದ ಕುತೂಹಲ ಕೆರಳಿಸಿರುವ ಗುಜರಾತ್‍ನ ಹೈವೋಲ್ಟೇಜ್ ವಿಧಾನಸಭೆ ಚುನಾವಣೆಯ ಪ್ರಚಾರ ದಿನೇ ದಿನೇ ಮತ್ತಷ್ಟು ರಂಗೇರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಗುಜರಾತ್‍ನಲ್ಲಿ ಇಂದು ಮೂರು ರ‍್ಯಾಲಿಗಳಲ್ಲಿ ಭಾಗವಹಿಸಿದರು. ಇಂದಿನ ಕಾರ್ಯಕ್ರಮಗಳೂ ಸೇರಿದಂತೆ 6 ದಿನಗಳಲ್ಲಿ ಪ್ರಧಾನಿ 31 ಸಭೆಗಳು, ಮತ್ತು ಸಾರ್ವಜನಿಕ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಉತ್ತರಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ ಉತ್ಸಾಹದಲ್ಲಿರುವ ಮೋದಿ ಇಂದಿನಿಂದ ಮತ್ತೆ ಎರಡು ದಿನಗಳ ಗುಜರಾತ್ ಚುನಾವಣಾ ಪ್ರವಾಸ ಕೈಗೊಂಡಿದ್ದಾರೆ. ಇಂದು ಬರೂಚಾ ಮತ್ತು ಸುರೇಂದ್ರನಗರ ಸೇರಿದಂತೆ ಮೂರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿ ತಮ್ಮ ಸರ್ಕಾರದ ಸಾಧನೆಗಳನ್ನು ತಿಳಿಸಿ ಬಿಜೆಪಿಗೆ ಮತ ನೀಡಿವಂತೆ ಕೋರಿದರು. ಸ್ವಾಮಿನಾರಾಯಣ ಗುರುಕುಲ ವಿಶ್ವವಿದ್ಯಾ ಪ್ರತಿಷ್ಠಾನಂನಲ್ಲಿ(ಎಸ್‍ಜಿವಿಪಿ) ಅಸ್ಪತ್ರೆಯೊಂದನ್ನು ಉದ್ಘಾಟಿಸುವರು. ನಾಳೆ ಮೋದಿ ನಾಲ್ಕು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿದೆ. ಡಿ.6ರ ನಂತರ ಅವರು 24 ಸಭೆಗಳನ್ನು ನಡೆಸುವ ನಿರೀಕ್ಷೆ ಇದೆ. ಡಿಸೆಂಬರ್ 9 ಮತ್ತು 14ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

Facebook Comments

Sri Raghav

Admin