ಚಾಲಕನ ನಿಯಂತ್ರಣ ತಪ್ಪಿ  ಜಮೀನಿಗೆ ನುಗ್ಗಿದ ಕೆಎಸ್‍ಆರ್‍ಟಿಸಿ ಬಸ್

ಈ ಸುದ್ದಿಯನ್ನು ಶೇರ್ ಮಾಡಿ

KSRT-02

ಕೆ.ಆರ್.ಪೇಟೆ, ಡಿ.3- ತಾಲೂಕಿನ ಆಲೇನಹಳ್ಳಿ ಗ್ರಾಮದ ಬಳಿ ಕೆಎಸ್‍ಆರ್‍ಟಿಸಿ ಬಸ್ಸೊಂದು ನಿಯಂತ್ರಣ ತಪ್ಪಿ ಗದ್ದೆಗೆ ನುಗ್ಗಿದ್ದು , ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಆಲೇನಹಳ್ಳಿಯಿಂದ ಕೆ.ಆರ್.ಪೇಟೆ ಪಟ್ಟಣಕ್ಕೆ ಬರುತ್ತಿದ್ದ ಬಸ್‍ನ ಸ್ಟೇರಿಂಗ್ ರಾಡ್ ಮುರಿದ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ನಂತರ ರಸ್ತೆ ಬದಿಯ ಜಮೀನೊಳಗೆ ನುಗ್ಗಿದ್ದು ಮಣ್ಣಿನಲ್ಲಿ ಚಕ್ರ ಹೂತಿಕೊಂಡ ಪರಿಣಾಮ ಪ್ರಯಾಣಿಕರ ಜೀವ ಉಳಿದಿದೆ.  ಸುಮಾರು 20 ಜನ ಪ್ರಯಾಣಿಕರು ಇದ್ದರು ಎಂದುಹೇಳಲಾಗಿದೆ. ಮರಕ್ಕೇನಾದರೂ ಡಿಕ್ಕಿ ಹೊಡೆದಿದ್ದರೆ ಭಾರೀ ದುರಂತ ಸಂಭವಿಸುತ್ತಿತ್ತು. ಆದರೆ ಬಸ್‍ನ ಚಾಲಕ ಜಯಕೀರ್ತಿ ಎಂಬುವವರು ಸಮಯ ಪ್ರಜ್ಞೆಯಿಂದ ಅವಘಡ ತಪ್ಪಿದೆ ಎಂದು ತಿಳಿದು ಬಂದಿದೆ.

Facebook Comments

Sri Raghav

Admin