ಆತ್ಮಹತ್ಯೆ, ಅಪಘಾತದಿಂದ ಪ್ರತಿವರ್ಷ ಸಾವನ್ನಪ್ಪುತ್ತಿದ್ದಾರೆ 1,600 ಯೋಧರು..!

ಈ ಸುದ್ದಿಯನ್ನು ಶೇರ್ ಮಾಡಿ

Army--02

ನವದೆಹಲಿ, ಡಿ.3- ಪ್ರತಿ ವರ್ಷ ಸುಮಾರು 1,600 ಯೋಧರು ಅಪಘಾತ ಮತ್ತು ಆತ್ಮಹತ್ಯೆಯಿಂದ ಸಾವಿಗೀಡಾಗುತ್ತಿರುವ ಆತಂಕಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಯುದ್ಧ ಮಾಡದೇ ಸೈನಿಕರು ಈ ಅಪಘಾತ ಮತ್ತು ಆತ್ಮಹತ್ಯೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂಬುದು ಅಂಕಿ-ಅಂಶಗಳಿಂದ ತಿಳಿದಿದೆ.
ಕಣಿವೆ ರಾಜ್ಯ ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಉದ್ದಕ್ಕೂ ನಡೆಯುತ್ತಿರುವ ಸಂಘರ್ಷದಲ್ಲಿ(ಉಗ್ರರ ವಿರುದ್ಧ ಕಾರ್ಯಾಚರಣೆ ಅಥವಾ ಭಾರತ-ಪಾಕಿಸ್ತಾನ ನಡುವೆ ಗುಂಡಿನ ಚಕಮಕಿ) ಆಗುವ ಪ್ರಾಣಹಾನಿಗಿಂತಲ್ಲೂ ಹೆಚ್ಚಿನ ಸಾವುಗಳು ಈ ಎರಡು ಕಾರಣಗಳಿಂದ ಸಂಭವಿಸುತ್ತಿವೆ.

ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಭೂಸೇನೆ, ವಾಯುಪಡೆ ಮತ್ತು ನೌಕಾದಳದ ಸುಮಾರು 1,600 ಸಿಬ್ಬಂದಿ ಅಪಘಾತ ಅಥವಾ ಅತ್ಯಹತ್ಯೆಯಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದರೊಂದಿಗೆ ಸಾವಿಗೆ ಇತರ ಪ್ರಮುಖ ಕಾರಣಗಳೆಂದರೆ ತರಬೇತಿ ಸಂದರ್ಭದಲ್ಲಿ ಸಂಭವಿಸುವ ಆಕಸ್ಮಿಕಗಳು ಮತ್ತು ಅನಾರೋಗ್ಯ ಸಮಸ್ಯೆ.   ವಿಶ್ವದಲ್ಲೇ ಅತ್ಯಧಿಕ ಮಂದಿ ರಸ್ತೆ ಅಪಘಾತಗಳಲ್ಲಿ ಬಲಿಯಾಗುತ್ತಿರುವ ದೇಶ ಎಂಬ ಕುಖ್ಯಾತಿ ಪಡೆದಿರುವ ಭಾರತ ಅತ್ಯಹತ್ಯೆ ಪ್ರಕರಣದಲ್ಲೂ ಅಗ್ರಸ್ಥಾನ ಗಳಿಸಿದೆ. ಈ ಎರಡು ಪ್ರಕರಣಗಳೂ ಭಾರತೀಯ ಸೇನಾ ಪಡೆಗಳ ಮೇಲೂ ಪರಿಣಾಮ ಬೀರಿದೆ.  2015ರ ನಂತರ ಭಾರತದ ಭೂಸೇನೆ, ವಾಯುಪಡೆ ಮತ್ತು ನೌಕಾದಳಗಳು 6,500 ಸಿಬ್ಬಂದಿಯನ್ನು ಕಳೆದುಕೊಂಡಿದೆ.

Facebook Comments

Sri Raghav

Admin