ಮತ್ತೊಬ್ಬ ಕುಖ್ಯಾತ ಎಲ್‍ಇಟಿ ಉಗ್ರನನ್ನು ಸೆರೆಹಿಡಿದ ಎನ್‍ಐಎ

ಈ ಸುದ್ದಿಯನ್ನು ಶೇರ್ ಮಾಡಿ

NIA--01

ಪಾಟ್ನಾ, ಡಿ.3- ಪಾಕಿಸ್ತಾನದ ನಿಷೇಧಿತ ಉಗ್ರಗಾಮಿ ಸಂಘಟನೆ ಲಷ್ಕರ್-ಎ-ತೈಬಾದ(ಎಲ್‍ಇಟಿ) ಮತ್ತೊಬ್ಬ ಕುಖ್ಯಾತ ಭಯೋತ್ಪಾದಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಅಧಿಕಾರಿಗಳು ಬಿಹಾರದಲ್ಲಿ ಬಂಧಿಸಿದ್ದಾರೆ. ಎಲ್‍ಇಟಿಯ ಮತ್ತೊಬ್ಬ ಉಗ್ರ ಅಬ್ದುಲ್ ನಯೀಮ್ ಶೇಖ್‍ನನ್ನು ಭದ್ರತಾ ಪಡೆಗಳು ಬಂಧಿಸಿ ಕೆಲವು ದಿನಗಳ ನಂತರ ಮತೊಬ್ಬ ಭಯೋತ್ಪಾದಕ ಬಲೆಗೆ ಬಿದ್ದಿದ್ದಾನೆ.

ನಯೀಮ್ ಶೇಖ್‍ಗೆ ಆಶ್ರಯ ನೀಡಿ ಭಯೋತ್ಪಾದನೆ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಾ ಲಷ್ಕರ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಧನು ರಾಜಾ ಎಂಬಾತನನ್ನು ಎನ್‍ಐಎ ಅಧಿಕಾರಿಗಳು ಗೋಪಾಲ್‍ಗಂಜ್‍ನಲ್ಲಿ ಸೆರೆ ಹಿಡಿದಿದ್ದಾರೆ. ಕೆಲವು ವಾರಗಳ ಯೋಜಿತ ಕಾರ್ಯಾಚರಣೆಗಳ ನಂತರ, ಭದ್ರತಾ ಪಡೆಗಳು ಮಹಾರಾಷ್ಟ್ರದ ಔರಂಗಾಬಾದ್ ನಿವಾಸಿ ಶೇಖ್‍ನನ್ನು ವಾರಣಾಸಿಯಲ್ಲಿ ಇತ್ತೀಚೆಗೆ ಬಂಧಿಸಲಾಗಿತ್ತು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin