ಮಾಸ್ಕ್ ಧರಿಸಿ ಅಖಾಡಕ್ಕಿಳಿದ ಸಿಂಹಳೀಯರು

Mask--02

ನವದೆಹಲಿ, ಡಿ.3- ದಟ್ಟವಾದ ಮಂಜಿನಿಂದ ಶ್ರೀಲಂಕಾದ ನಾಯಕ ದಿನೇಶ್ ಚಾಂಡಿಮಲ್ ಸೇರಿದಂತೆ ಕೆಲವು ಆಟಗಾರರು ಮಾಸ್ಕ್ ಗಳನ್ನು ಧರಿಸಿ ಅಖಾಡಕ್ಕೆ ಇಳಿದಿದ್ದು ಗಮನ ಸೆಳೆಯಿತು.  ಫಿರೋಜ್‍ಷಾ ಕೋಟ್ಲಾ ಮೈದಾನದಲ್ಲಿ ನಿನ್ನೆಯಿಂದ ಶುರುವಾಗಿರುವ ಅಂತಿಮ ಟೆಸ್ಟ್‍ಗೆ ದಟ್ಟವಾದ ಹೊಗೆ ಮತ್ತು ಮಂಜು ಆವರಿಸಿದ್ದರಿಂದ ಇಂದು ಭೋಜನ ವಿರಾಮದ ನಂತರ ಲಂಕಾದ ನಾಯಕ ಲಕ್ಮಲ್ ಸೇರಿದಂತೆ ಲಂಕಾದ ಅಜೆಂಲೋ ಮ್ಯಾಥ್ಯೂಸ್, ರೋಶನ್ ಸಿಲ್ವಾ ಹಾಗೂ ಸುರಂಗ ಲಕ್ಮಲ್ ಅವರು ಹೊಗೆಯನ್ನು ನಿಯಂತ್ರಿಸುವ ಮಾಸ್ಕ್‍ಗಳನ್ನು ಧರಿಸಿ ಅಂಗಳಕ್ಕೆ ಇಳಿದರು.

ಭೋಜನ ವಿರಾಮಕ್ಕೆ ಇನ್ನೂ 30 ನಿಮಿಷಗಳ ಅವಧಿಯಿರುವಾಗ ಲಂಕಾದ ಬೌಲರ್ ಲಹಿರು ಗಮಗೆ ಅವರು ಶೀತದಿಂದ ಬಳಲುವಂತಾಯಿತು. ಅಲ್ಲದೆ ಭಾರತ ತಂಡದ ಫೀಲ್ಡಿಂಗ್ ತರಬೇತುದಾರ ಆರ್.ಶ್ರೀಧರ್ ಹಾಗೂ ಸ್ಪಿನ್ನರ್ ಕುಲದೀಪ್‍ಯಾದವ್ ಕೂಡ ಮಾಸ್ಕ್‍ಗಳನ್ನು ಧರಿಸಿದ್ದು ವಿಶೇಷವಾಗಿತ್ತು.

Facebook Comments

Sri Raghav

Admin