ಸಚಿನ್‍ರ ಮತ್ತೊಂದು ದಾಖಲೆ ಸರಿಗಟ್ಟಿದ ವಿರಾಟ್

ಈ ಸುದ್ದಿಯನ್ನು ಶೇರ್ ಮಾಡಿ

Sachin--02

ನವದೆಹಲಿ, ಡಿ.3- ಕ್ರಿಕೆಟ್ ಮಾಂತ್ರಿಕ ಸಚಿನ್‍ತೆಂಡೂಲ್ಕರ್‍ರ ದಾಖಲೆಯನ್ನು ಮುರಿಯಬಲ್ಲ ಏಕೈಕ ಆಟಗಾರನೆಂದು ಗುರುತಿಸಿಕೊಂಡಿರುವ ರನ್ ಮಿಷಿನ್ ವಿರಾಟ್ ಕೊಹ್ಲಿ ಈಗ ಸಚಿನ್‍ರ ಮತ್ತೊಂದು ದಾಖಲೆಯನ್ನು ಸರಿಗಟ್ಟಿದ್ದಾರೆ. ನಾಗ್ಪುರ ಟೆಸ್ಟ್‍ನಲ್ಲಿ ಸೆಂಚುರಿ ಗಳಿಸುವ ಮೂಲಕ ಅತಿ ಹೆಚ್ಚು ಶತಕ ಗಳಿಸಿದ ಕೀರ್ತಿಯನ್ನು ತಮ್ಮದಾಗಿಸಿಕೊಂಡ ಕೊಹ್ಲಿ ಈಗ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ದ್ವಿಶತಕ ಗಳಿಸಿದ ಆಟಗಾರನಾಗಿ ರೂಪುಗೊಂಡಿದ್ದಾರೆ.

ನಾಗ್ಪುರ ಟೆಸ್ಟ್‍ನಲ್ಲಿ ದ್ವಿಶತಕ ಗಳಿಸಿದ ಬೆನ್ನಲ್ಲೇ ದೆಹಲಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‍ನಲ್ಲೂ ದ್ವಿಶತಕ ಗಳಿಸಿರುವುದು ದಾಖಲೆಯಾಗಿದೆ.
ಈ ಮುನ್ನ ಭಾರತ ತಂಡದ ಪರ ನಜಾಫ್‍ಘಡದ ಸಚಿನ್ ಎಂದೇ ಗುರುತಿಸಿಕೊಂಡಿರುವ ವೀರೇಂದ್ರ ಸೆಹ್ವಾಗ್ (6 ದ್ವಿಶತಕ, 104 ಪಂದ್ಯಗಳು), ಸಚಿನ್ ತೆಂಡೂಲ್ಕರ್ (6 ದ್ವಿಶತಕ, 200 ಪಂದ್ಯಗಳು) ಅತಿ ಹೆಚ್ಚು ದ್ವಿಶತಕ ಗಳಿಸಿದ ಆಟಗಾರರಾಗಿ ಗುರುತಿಸಿಕೊಂಡಿದ್ದರು, ಈಗ ವಿರಾಟ್ ಕೊಹ್ಲಿ ಕೂಡ 6 ದ್ವಿಶತಕವನ್ನು ಗಳಿಸಿದ್ದು ಇದಕ್ಕಾಗಿ ಅವರು ಆಡಿದ್ದು 63 ಪಂದ್ಯಗಳನ್ನು ಮಾತ್ರ.

ಅತಿ ಹೆಚ್ಚು ದ್ವಿಶತಕ ಗಳಿಸಿದ ಆಟಗಾರರು:

ಡಾನ್ ಬ್ರಾಡ್‍ಮೆನ್ (ಆಸ್ಟ್ರೇಲಿಯಾ, 12 ದ್ವಿಶತಕ, 52 ಪಂದ್ಯಗಳು)
ಕುಮಾರಸಂಗಾಕಾರ (ಶ್ರೀಲಂಕಾ, 11 ದ್ವಿಶತಕ, 134 ಪಂದ್ಯಗಳು)
ಬ್ರಿಯಾನ್ ಲಾರಾ (ವೆಸ್ಟ್‍ಇಂಡೀಸ್, 9 ದ್ವಿಶತಕ, 131 ಪಂದ್ಯಗಳು)
ವೆಲ್ಲಿ ಹೋಮ್ಯಾಂಡ್ (ಇಂಗ್ಲೆಂಡ್, 7 ದ್ವಿಶತಕ, 85 ಪಂದ್ಯಗಳು)
ಮಹೇಲ ಜಯವರ್ಧನೆ (ಶ್ರೀಲಂಕಾ, 7 ದ್ವಿತಕ, 149 ಪಂದ್ಯಗಳು)
ಮರ್ವನ್ ಅಟಪಟ್ಟು (ಶ್ರೀಲಂಕಾ, 6 ದ್ವಿಶತಕ, 90 ಪಂದ್ಯಗಳು)
ಜವೀದ್ ಮಿಂದಾದ್ (ಪಾಕಿಸ್ತಾನ, 6 ದ್ವಿಶತಕ, 104 ಪಂದ್ಯಗಳು)
ಯುನಿಸ್ ಖಾನ್ (ಪಾಕಿಸ್ತಾನ, 6 ದ್ವಿಶತಕ, 118 ಪಂದ್ಯಗಳು)
ರಿಕ್ಕಿ ಪಾಂಟಿಂಗ್ (ಆಸ್ಟ್ರೇಲಿಯಾ, 6 ದ್ವಿಶತಕ, 168 ಪಂದ್ಯಗಳು)

Facebook Comments

Sri Raghav

Admin