ಸಾಮೂಹಿಕ ವಿವಾಹದಲ್ಲಿ 2ನೇ ಮದುವೆಯಾಗುತ್ತಿದ್ದ ಭೂಪನಿಗೆ ಮೊದಲ ಪತ್ನಿಯಿಂದ ಮಂಗಳಾರತಿ..!

ಈ ಸುದ್ದಿಯನ್ನು ಶೇರ್ ಮಾಡಿ

Marriage--02

ಬಾಗಲಕೋಟೆ, ಡಿ.3- ಈ ಭೂಪ ಸಾಮೂಹಿಕ ವಿವಾಹದಲ್ಲೇ ಎರಡನೇ ಮದುವೆಯಾಗಲು ಬಂದಿದ್ದ. ಮದುವೆಗೆ ಬಂದಿದ್ದ ಮೊದಲ ಪತ್ನಿ ಈತನನ್ನು ನೋಡಿ ಭೂಪನ ಬೂತ ಬಿಡಿಸಿರುವ ಘಟನೆ ನಗರದಲ್ಲಿ ನಡೆದಿದೆ.ಬಸವೇಶ್ವರ ಸಹಕಾರಿ ಬ್ಯಾಂಕ್‍ನ ಶತಮಾನೋತ್ಸವ ಆಚರಣೆ ಪ್ರಯುಕ್ತ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು, ವಿಜಯಪುರ ಬೆಳ್ಳುಳ್ಳಿ ಗ್ರಾಮದ ಈರಣ್ಣನಾಯಕೊಂಡ ಎಂಬಾತ ತನ್ನ ಮೊದಲ ಹೆಂಡತಿ ಸರಿಯಾಗಿ ಸಂಸಾರ ಮಾಡುತ್ತಿಲ್ಲ. ಕಳೆದ

ಐದು ವರ್ಷಗಳಿಂದ ನನ್ನ ಜತೆ ಸಂಸಾರ ನಡೆಸುತ್ತಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ಬೇವೂರು ಗ್ರಾಮದ ಯುವತಿಯನ್ನು ಎರಡನೇ ಮದುವೆಯಾಗಲು ಸಜ್ಜಾಗಿದ್ದ. ಆದರೆ, ಮೊದಲನೆ ಹೆಂಡತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರಿಂದ ಮದುವೆ ನಿಂತಿದೆ. ಪತಿರಾಯ ಹೇಳುವುದೇ ಬೇರೆ. ಮದುವೆಯಾಗಿ ಆಕೆ ಎರಡು ತಿಂಗಳಷ್ಟೇ ತನ್ನ ಮನೆಯಲ್ಲಿದ್ದು, ತವರು ಮನೆಗೆ ಹೋಗಿದ್ದಾಳೆ. ನ್ಯಾಯಾಲಯದಲ್ಲಿ ವಿಚ್ಚೇಧನ ನೀಡುವಂತೆ ಕೋರಿದ್ದು, ಈಗಾಗಲೇ ಆದೇಶವಾಗಿದೆ. ವಿಚ್ಛೇದನ ನೀಡಿರುವುದಕ್ಕೇ ಮತ್ತೊಂದು ಮದುವೆಯಾಗಲು ಬಂದಿದ್ದೇನೆ. ನ್ಯಾಯಾಲಯದ ಆದೇಶದ ಪ್ರತಿಯನ್ನು ಪೊಲೀಸರಿಗೆ ನೀಡಿ ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ.

Facebook Comments

Sri Raghav

Admin