ಅಮೆರಿಕ-ದಕ್ಷಿಣ ಕೊರಿಯಾ ಬೃಹತ್ ಜಂಟಿ ವಾಯು ಸಮರಾಭ್ಯಾಸ

ಈ ಸುದ್ದಿಯನ್ನು ಶೇರ್ ಮಾಡಿ

South-K02

ಸಿಯೋಲ್, ಡಿ.4- ಅಣ್ವಸ್ತ್ರ ಕ್ಷಿಪಣಿಗಳ ಪುನರಾವರ್ತಿತ ಪರೀಕ್ಷಾರ್ಥ ಉಡಾವಣೆಗಳಿಂದ ಕದನಮೋಹಿ ಉತ್ತರ ಕೊರಿಯಾ ವಿಶ್ವವನ್ನು ಕೆಣಕಿರುವ ಸಂದರ್ಭದಲ್ಲೇ ಇತ್ತ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಬೃಹತ್ ಜಂಟಿ ವಾಯು ಸಮರಾಭ್ಯಾಸ ಆರಂಭಿಸಿವೆ. ಈ ವಾಯು ತಾಲೀಮನ್ನು ಪ್ರಚೋದನೆಯ ಕೃತ್ಯ ಎಂದು ಉತ್ತರ ಕೊರಿಯಾ ಟೀಕಿಸಿದೆ.  ವಿಜಿಲೆಂಟ್ ಏಸ್ ಡ್ರಿಲ್ ಹೆಸರಿನ ಈ ಐದು ದಿನಗಳ ಜಂಟಿ ಸಮರಾಭ್ಯಾಸದಲ್ಲಿ ಎಫ್-22 ರಾಪ್ಟರ್ ಬೇಹುಗಾರಿಕೆ ಜೆಟ್ ಫೈಟರ್‍ಗಳೂ ಸೇರಿದಂತೆ 230 ಯುದ್ಧ ವಿಮಾನಗಳು ಹಾಗೂ ಸಹಸ್ರಾರು ಯೋಧರು ಪಾಲ್ಗೊಳ್ಳಲಿದ್ದಾರೆ ಎಂದು ದಕ್ಷಿಣ ಕೊರಿಯಾ ವಾಯಪಡೆ ತಿಳಿಸಿದೆ.

ವಾಷಿಂಗ್ಟನ್‍ನನ್ನು ಚಿಂದಿ ಉಡಾಯಿಸಲಬಲ್ಲ ಅತ್ಯಂತ ಶಕ್ತಿಯುತ ಖಂಡಾಂತರ ಕ್ಷಿಪಣಿಯನ್ನು(ಐಸಿಎಂಬಿ) ಉತ್ತರ ಕೊರಿಯಾ ಪರೀಕ್ಷಾರ್ಥ ಪ್ರಯೋಗಕ್ಕೆ ಒಳಪಡಿಸಿದ ಐದು ದಿನಗಳ ನಂತರ ಪಯೊಂಗ್‍ಯಾಂಗ್‍ಗೆ ಎಚ್ಚರಿಕೆ ನೀಡಲೆಂಬಂತೆ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಬೃಹತ್ ವಾಯು ಯುದ್ಧಾಭ್ಯಾಸ ಆರಂಭಿಸಿದೆ.

Facebook Comments

Sri Raghav

Admin