ಇವಿಎಂ-ವಿವಿಪಿಎಟಿ ತಾಳೆ ನೋಡಲು ಚುನಾವಣಾ ಆಯೋಗ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

VV-Pat--011

ನವದೆಹಲಿ, ಡಿ.4-ಎಲೆಕ್ಟ್ರಾನಿಕ್ ವೋಟಿಂಗ್ ಮಿಷನ್‍ಗಳಲ್ಲಿ ತಾಂತ್ರಿಕವಾಗಿ ರಿಗ್ಗಿಂಗ್ ನಡೆಯುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪದಿಂದ ಮುಕ್ತವಾಗಲು ಚುನಾವಣಾ ಆಯೋಗ ಹೊಸ ಸೂತ್ರ ಜಾರಿಗೆ ತರಲು ನಿರ್ಧರಿಸಿದೆ. ಗುಜರಾತ್ ವಿಧಾನಸಭಾ ಚುನಾವಣೆಯ ಎಲ್ಲ 182 ಮತಕ್ಷೇತ್ರಗಳಲ್ಲಿ ತಲಾ ಒಂದು ಮತಗಟ್ಟೆಯಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಿಷನ್(ಇವಿಎಂ) ಹಾಗೂ ವೋಟರ್ ವೆರಿಫಯೇಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಮತಗಳ ಸಂಖ್ಯೆಯಲ್ಲಿ ತಾಳೆ ನೋಡುವುದಾಗಿ ಆಯೋಗ ಘೋಷಿಸಿದೆ.

ಉತ್ತರ ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ವಿರೋಧ ಪಕ್ಷಗಳ ಆರೋಪದ ಬೆನ್ನಲ್ಲೇ ಆಯೋಗ ಈ ನಿರ್ಧಾರ ಪ್ರಕಟಿಸಿದೆ. ಎಲೆಕ್ಟ್ರಾನಿಕ್ ಮತಯಂತ್ರಗಳ ಬಗೆಗಿನ ಜನ ವಿಶ್ವಾಸ ಉಳಿಸಿಕೊಳ್ಳುವ ಸಲುವಾಗಿ ಈ ಎರಡೂ ಮತಗಳು ತಾಳೆಯಾಗುತ್ತವೆಯೇ ಎಂಬ ಬಗ್ಗೆ ಪ್ರತಿ ಕ್ಷೇತ್ರದ ತಲಾ ಒಂದು ಮತಗಟ್ಟೆಯಲ್ಲಿ ಪ್ರಾಯೋಗಿಕವಾಗಿ ಪರಿಶೀಳಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತರಾದ ಎ.ಕೆ.ಜೋತಿ ಹೇಳಿದ್ದಾರೆ.
ಎಲ್ಲ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲೇ ಮತಗಟ್ಟೆಯನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Facebook Comments

Sri Raghav

Admin