ಡಿ.13ರಿಂದ ಜ.16ರವರೆಗೆ ರಾಜ್ಯಾದ್ಯಂತ ಸಿಎಂ ಸಿದ್ದರಾಮಯ್ಯ ಪ್ರವಾಸ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಬೆಂಗಳೂರು,ಡಿ.4-ರಾಜ್ಯ ಸರ್ಕಾರ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಾದ್ಯಂತ ಒಂದು ತಿಂಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಮುನ್ನವೇ ಸರ್ಕಾರ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮಾಡಿ ಮುಗಿಸುವ ಉದ್ದೇಶದಿಂದ ಡಿ.13ರಿಂದ 2018ರ ಜ.16ರವರೆಗೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಬೀದರ್ ಜಿಲ್ಲೆಯಿಂದ ಪ್ರತಿದಿನ ವಿಧಾನಸಭಾ ಕ್ಷೇತ್ರವಾರು ಒಂದಿಲ್ಲೊಂದು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲ 30 ಜಿಲ್ಲೆಗಳಲ್ಲೂ ಪ್ರವಾಸ ಮಾಡಲಿದ್ದು, ಇದರಿಂದ ಮುಂದಿನ ವಿಧಾನಸಭೆ ಚುನಾವಣೆಗೆ ಜನರ ನಾಡಿಮಿಡಿತ ಹೇಗೆ ಎಂದು ಅರಿಯಲು ಆಂದೋಲನ ರೀತಿಯಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಡಿ.13ರಂದು ಬೀದರ್ ಜಿಲ್ಲೆಯ ಬಸವ ಕಲ್ಯಾಣ, ಉಮ್ನಾಬಾದ್, ಬಾಲ್ಕಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಿಎಂ ಪ್ರವಾಸ ಮಾಡಲಿದ್ದು, 14ರಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದು, 15ರಂದು ರಾಯಚೂರು ಜಿಲ್ಲೆಯ ಲಿಂಗಸೂರು, ಮಾನ್ವಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಪ್ರತಿದಿನ ಒಂದೊಂದು ಜಿಲ್ಲೆಯಲ್ಲಿ ಪ್ರವಾಸ ಮಾಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮಾರು ಒಂದು ತಿಂಗಳ ಕಾಲ ರಾಜಧಾನಿಯಿಂದ ಹೊರಗುಳಿಯಲಿದ್ದಾರೆ.

ಡಿ.16ರಂದು ಕಲ್ಬುರ್ಗಿ ಜಿಲ್ಲೆಯ ಅಫ್ಜಲ್‍ಪುರ, ಸೇಡಂ, ಜೇವರ್ಗಿ, ವಿಧಾನಸಭಾ ಕ್ಷೇತ್ರಗಳಲ್ಲಿ , 17ರಂದು ಯಾದಗಿರಿ, 18ರಂದು ಬಳ್ಳಾರಿ, 19ರಂದು ಬಾಗಲಕೋಟೆ, 20ರಂದು ವಿಜಯಪುರ, 21 ಮತ್ತು 22ರಂದು ಬೆಳಗಾವಿ ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಪ್ರವಾಸ ನಿಗದಿಯಾಗಿದೆ. ಡಿ.23ರಂದು ಧಾರವಾಡ, 24ರಂದು ಹಾವೇರಿ, 25ರಂದು ಗದಗ, 26ರಂದು ದಾವಣಗೆರೆ, 27ರಂದು ಚಿತ್ರದುರ್ಗ ಜಿಲ್ಲೆಗಳ ವಿಧಾನಸಭಾ ಕ್ಷೇತ್ರವಾರು ಪ್ರವಾಸ ಮಾಡುವರು.

ಡಿ.28ರಂದು ತುಮಕೂರು, 29ರಂದು ಚಿಕ್ಕಬಳ್ಳಾಪುರ, 30ರಂದು ಕೋಲಾರ ವಿಧಾನಸಭಾ ಕ್ಷೇತ್ರವಾರು ಪ್ರವಾಸ ಮಾಡಲಿರುವ ಮುಖ್ಯಮಂತ್ರಿ ಅವರು ಡಿ.31 ಮತ್ತು ಜನವರಿ 1ರಂದು ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿ ಕಾರ್ಯ ನಿರ್ವಹಿಸುವ ಕಾರ್ಯಕ್ರಮವಿದೆ. 2018ರ ಜ.3ರಂದು ರಾಮನಗರ, 4ರಂದು ಹಾಸನ, 5ರಂದು ಚಿಕ್ಕಮಗಳೂರು, 6ರಂದು ಶಿವಮೊಗ್ಗ, 7ರಂದು ದಕ್ಷಿಣ ಕನ್ನಡ, 8ರಂದು ಉಡುಪಿ, 9ರಂದು ಕೊಡುಗು, 10ರಂದು ಚಾಮರಾಜನಗರ, 11ರಂದು ಮೈಸೂರು, 12ರಂದು ಮಂಡ್ಯ ಮತ್ತು ಜ.13ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಧಾನಸಭಾ ಕ್ಷೇತ್ರವಾರು ಮುಖ್ಯಮಂತ್ರಿ ಪ್ರವಾಸ ಕೈಗೊಳ್ಳಲಿದ್ದಾರೆ.

Facebook Comments

Sri Raghav

Admin