ತ್ರಿವಳಿ ತಲಾಖ್ ನೀಡುವವರಿಗೆ ಭಯ ಹುಟ್ಟಿಸಲು ಕಾನೂನು ಕಠಿಣ ಬೇಕು

ಈ ಸುದ್ದಿಯನ್ನು ಶೇರ್ ಮಾಡಿ

Talaq-Talaq-Talaq

ನವದೆಹಲಿ, ಡಿ.4- ಈಗಲೂ ತ್ರಿವಳಿ ತಲಾಖ್ ಅನುಸರಿಸುತ್ತಿರುವ ಮಂದಿಯಲ್ಲಿ ಭಯ ಹುಟ್ಟಿಸಲು ಕಾನೂನು ಅತಿ ಮುಖ್ಯ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಸೈಯದ್ ಘಯೊರುಲ್ ಹಸನ್ ರಿಜ್ವಿ ಹೇಳಿದ್ದಾರೆ.  ದೇಶದಲ್ಲಿ ನಿರ್ದಿಷ್ಟ ಅವಧಿಗಾಗಿ ತ್ರಿವಳಿ ತಲಾಕ್ ಮೇಲೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದ್ದರೂ ಅದನ್ನು ಈ ಆಚರಣೆಯನ್ನು ಮುಂದುವರಿಸುತ್ತಿರುವ ಮಂದಿಗೆ ಸೈಯದ್ ಅವರ ಹೇಳಿಕೆಯು ಎಚ್ಚರಿಕೆ ಗಂಟೆಯಾಗಿದೆ. ಈ ಹಿಂದೆಯೂ ತ್ರಿವಳಿ ತಲಾಖ್ ಪರ ಇದ್ದವರು ಕಾನೂನು ವಿರೋಧಿಗಳಾಗಿದ್ದರು.

ಈಗ ಸರ್ವೋಚ್ಛ ನ್ಯಾಯಾಲಯವು ಒಂದು ನಿರ್ದಿಷ್ಟ ಅವಧಿಗೆ ಈ ಆಚರಣೆಯನ್ನು ರದ್ದುಗೊಳಿಸಿದೆ. ಇಷ್ಟಾದರೂ ತ್ರಿವಳಿ ತಲಾಕ್‍ನನ್ನು ಮುಂದುವರಿಸುತ್ತಿರುವವರಲ್ಲಿ ಭಯ ಹುಟ್ಟಿಸಲು ಕಾನೂನು ಅತಿ ಮುಖ್ಯ ಎಂದು ಆಯೋಗದ ಅಧ್ಯಕ್ಷರು ಹೇಳಿದ್ದಾರೆ.  ಸುಪ್ರೀಂ ಕೋರ್ಟ್ ತೀರ್ಪಿನ ನಂತರವೂ ವ್ಯಾಟ್ಸಾಪ್ ಮತ್ತು ಫೋನ್‍ಗಳ ಮೂಲಕ ಅನೇಕರು ತ್ರಿವಳಿ ತಲಾಖ್ ನೀಡುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin