ದೇಶದಲ್ಲೇ ಅಪರಾಧಗಳ ಪತ್ತೆಯಲ್ಲಿ ನಮ್ಮ ರಾಜ್ಯವೇ ನಂ.1 : ರಾಮಲಿಂಗಾರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Ramalingareddy--01ಬೆಂಗಳೂರು, ಡಿ.4- ಕರ್ನಾಟಕದಲ್ಲಿ ಅಪರಾಧಗಳ ಸಂಖ್ಯೆ ಇಳಿಮುಖವಾಗಿದ್ದು, ದೇಶದ ರಾಜ್ಯಗಳಲ್ಲಿ 9ನೇ ಸ್ಥಾನದಲ್ಲಿದೆ. ಅಪರಾಧಗಳ ಪತ್ತೆಯಲ್ಲಿ ನಮ್ಮ ರಾಜ್ಯ ದೇಶದಲ್ಲೇ ನಂ.1 ಇದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದ ಅಂಕಿ-ಸಂಖ್ಯೆಗಳನ್ನು ನೋಡಿದರೆ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. 2015ರಲ್ಲಿ ಕೊಲೆ, ಡಕಾಯಿತಿ, ರಾಬರಿ, ಕಳ್ಳತನದಂತಹ 13,958 ಪ್ರಕರಣಗಳು ನಡೆದಿದ್ದವು. ಅದರಲ್ಲಿ 4,901 ಪ್ರಕರಣವನ್ನು ಪತ್ತೆಹಚ್ಚಲಾಯಿತು. 2016ರಲ್ಲಿ 13,341 ಪ್ರಕರಣಗಳು ವರದಿಯಾಗಿದ್ದವು. 4056 ಪ್ರಕರಣಗಳು ಪತ್ತೆಯಾಗಿದ್ದವು. 2017ರ ಅಕ್ಟೋಬರ್ ಕೊನೆಯಲ್ಲಿ 11,645 ಪ್ರಕರಣಗಳು ನಡೆದು. 2919 ಪ್ರಕರಣಗಳು ಪತ್ತೆಯಾಗಿವೆ. ವಿಶೇಷ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಮುಖವಾಗಿದೆ ಎಂದು ಸಮಗ್ರ ಅಂಕಿ-ಅಂಶಗಳನ್ನು ಸಚಿವರು ನೀಡಿದರು.

ನಮ್ಮ ಪೆÇಲೀಸರು ಶೇ.60ರಷ್ಟು ಪ್ರಕರಣಗಳನ್ನು ಪತ್ತೆಹಚ್ಚುತ್ತಿದ್ದಾರೆ. ರಾಷ್ಟ್ರೀಯ ಸರಾಸರಿಯಲ್ಲಿ ನಾವು ತನಿಖೆಯಲ್ಲಿ ಮೊದಲಿಗರಾಗಿದ್ದೇವೆ ಎಂದು ಹೇಳಿದರು. ರಾಜ್ಯಮಟ್ಟದಲ್ಲಿ ಗುಜರಾತ್ ಅಪರಾಧ ಪ್ರಕರಣಗಳಲ್ಲಿ ಮೊದಲ ಸ್ಥಾನದಲ್ಲಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ರಾಜಸ್ಥಾನಗಳು ಕ್ರಮವಾಗಿ 8ರವರೆಗೂ ಸ್ಥಾನಗಳನ್ನು ಪಡೆದಿದ್ದು, ಕರ್ನಾಟಕ 9ನೇ ಸ್ಥಾನದಲ್ಲಿದೆ ಎಂದು ರಾಮಲಿಂಗಾರೆಡ್ಡಿ ವಿವರಿಸಿದರು.

Facebook Comments

Sri Raghav

Admin