ಪ್ಯಾನ್ ಕಾರ್ಡ್’ಗೆ ಆಧಾರ್ ಲಿಂಕ್ ಮಾಡಲು ಅವಧಿ ವಿಸ್ತರಣೆ

ಈ ಸುದ್ದಿಯನ್ನು ಶೇರ್ ಮಾಡಿ

Adhaar--01

ನವದೆಹಲಿ,ಡಿ.4-ಆಧಾರ್ ಕಾಯ್ದೆ ಕುರಿತು ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ ಪೂರಕ ತೀರ್ಪು ಬಂದರೆ, ಆಧಾರ್-ಪ್ಯಾನ್ ಜೋಡಣೆಗೆ 3ರಿಂದ 6 ತಿಂಗಳು ಹೆಚ್ಚಿನ ಸಮಯಾವಕಾಶ ನೀಡಲಾಗುವುದೆಂದು ಕೇಂದ್ರ ತಿಳಿಸಿದೆ. ಈ ಅವಧಿಯ ಬಳಿಕವೂ ಜೋಡಣೆ ಮಾಡದಿದ್ದರೆ, ಅಂತಹ ಪ್ಯಾನ್ ಕಾರ್ಡ್‍ಗಳನ್ನು ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದೆ. ಈ ಕ್ರಮದಿಂದ ಒಬ್ಬನೇ ವ್ಯಕ್ತಿಯ ವಿವಿಧ ಹೆಸರಿನಲ್ಲಿ ನಕಲಿ ಪ್ಯಾನ್‍ಕಾರ್ಡ್ ಪಡೆದು, ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುತ್ತಿರುವ ಪ್ರಕರಣಗಳು ಇಲ್ಲವಾಗುತ್ತವೆ. ಬೇನಾಮಿ ವಹಿವಾಟಿಗೂ ಕಡಿವಾಣ ಬೀಳುತ್ತದೆ ಎಂದು ಸರ್ಕಾರ ಹೇಳಿದೆ.

Facebook Comments

Sri Raghav

Admin