ಲಕ್ಷದ್ವೀಪದಲ್ಲಿ ಕೇರಳದ 9 ಬೆಸ್ತರ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Laskaha--01

ಕೊಚ್ಚಿ, ಡಿ.4-ಒಖಿ ಚಂಡಮಾರುತದಿಂದಾಗಿ ಲಕ್ಷದ್ವೀಪ ಕಡಲು ಪ್ರದೇಶದಲ್ಲಿ ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದ ಕೇರಳದ ಕೊಚ್ಚಿ ಪಟ್ಟಣದ 9 ಮೀನುಗಾರರಿದ್ದ ದೋಣಿಯನ್ನು ಭಾರತೀಯ ನೌಕಾಪಡೆ ಪತ್ತೆ ಮಾಡಿದ್ದು, ಎಲ್ಲರನ್ನೂ ರಕ್ಷಿಸಿದೆ. ಲಕ್ಷದ್ವೀಪದ ಕವರಟ್ಟಿಯ ಉತ್ತರಕ್ಕೆ 132 ನಾಟಿಕಲ್ ಮೈಲಿ ದೂರದಲ್ಲಿ ಐಲ್ಯಾಂಡ್ ಕ್ವೀನ್ ಹೆಸರಿನ ದೋಣಿಯಲ್ಲಿದ್ದ 9 ಸಿಬ್ಬಂದಿಯನ್ನು ಐಎನ್‍ಎಸ್ ಕೋಲ್ಕತಾ ನೌಕೆ ಪತ್ತೆ ಮಾಡಿದೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಅವರಿಗೆ ಆಹಾರ ಮತ್ತು ನೀರು ನೀಡಲಾಗಿದೆ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ.

ಮಂಗಳೂರಿನಿಂದ ಹೊರಟ್ಟಿದ್ದ 8 ಜನರ ರಕ್ಷಣೆ :

ಮಂಗಳೂರಿನಿಂದ ಲಕ್ಷದ್ವೀಪದತ್ತ ಹೊರಟ್ಟಿದ್ದ ನೌಕೆಯೊಂದರಲ್ಲಿ ಸಿಲುಕಿ ಜೀವನ್ಮರಣದೊಂದಿಗೆ ಹೋರಾಡುತ್ತಿದ್ದ 8 ಮಂದಿಯನ್ನೂ ಸಹ ಇಂದು ಬೆಳಗ್ಗೆ ರಕ್ಷಿಸಲಾಗಿದೆ. ಕಳೆದ ಐದು ದಿನಗಳಿಂದ ಅನ್ನಾಹಾರವಿಲ್ಲದೇ ನಿತ್ರಾಣ ಸ್ಥಿತಿಯಲ್ಲಿದ್ದ ಇವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇವರಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ.

Facebook Comments

Sri Raghav

Admin