ವಾಯು ಮಾಲಿನ್ಯ : ದೆಹಲಿ ಸರ್ಕಾರಕ್ಕೆ ಎನ್‍ಜಿಟಿ ತಪರಾಕಿ

ಈ ಸುದ್ದಿಯನ್ನು ಶೇರ್ ಮಾಡಿ

NGT-05

ನವದೆಹಲಿ, ಡಿ.4- ತೀವ್ರ ವಾಯು ಮಾಲಿನ್ಯ ನಿವಾರಣೆ ಮಾರ್ಗೋಪಾಯಗಳಿಗೆ ಸಮಗ್ರ ಕ್ರಿಯಾ ಯೋಜನೆ ಸಲ್ಲಿಸದ ದೆಹಲಿ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‍ಜಿಟಿ) ಇಂದು ತೀವ್ರ ತರಾಟೆ ತೆಗೆದುಕೊಂಡಿದೆ. ಅಲ್ಲದೇ ವಾಯು ಗುಣಮಟ್ಟ ಅತ್ಯಂತ ಕೆಟ್ಟದ್ದಾಗಿದ್ದರೂ ಕೂಡ ಭಾರತ-ಶ್ರೀಲಂಕಾ ಕ್ರಿಕೆಟ್ ಪಂದ್ಯ ನಡೆಸಿದ ಅಧಿಕಾರಿಗಳಿಗೂ ಎನ್‍ಜಿಟಿ ಛೀಮಾರಿ ಹಾಕಿದೆ.

ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಹಸಿರು ನ್ಯಾಯಮಂಡಳಿಯು ನಿರ್ದಿಷ್ಟ ಆದೇಶ ನೀಡಿದ್ದರೂ ಕೂಡ ವರದಿ ಸಲ್ಲಿಸಲು ಎಎಪಿ ಸರ್ಕಾರ ವಿಫಲವಾಗಿರುವುದಕ್ಕೆ ಎನ್‍ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪರಿಸರ ಇಲಾಖೆ ಕಾರ್ಯದರ್ಶಿ ಬದಲಾವಣೆಯಾಗಿದ್ದಾರೆ. ಹೀಗಾಗಿ ಕ್ರಿಯಾ ಯೋಜನೆ ವರದಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ಬೇಕು ಎಂದು ವಿಚಾರಣೆ ವೇಳೆ ದೆಹಲಿ ಪರ ವಕೀಲರು ಪೀಠಕ್ಕೆ ಮನವಿ ಮಾಡಿದ್ದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಎನ್‍ಜಿಟಿ ಮುಂದಿನ 48 ಗಂಟೆಗಳ ಒಳಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Facebook Comments

Sri Raghav

Admin