ಸ್ಯಾಂಡ್ ಆರ್ಟಿಸ್ಟ್ ಸುದರ್ಶನ್ ಪಟ್ನಾಯಕ್ ಆಸ್ಪತ್ರೆಗೆ ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

Artist--02

ಭುವನೇಶ್ವರ್,ಡಿ.4-ಇಂಟರ್ ನ್ಯಾಷನಲ್ ಸ್ಯಾಂಡ್ ಆರ್ಟ್ ಫೆಸ್ಟಿವಲ್ ಗಾಗಿ ಓಡಿಶಾಕ್ಕೆ ಆಗಮಿಸಿರುವ ಖ್ಯಾತ ಮರಳು ಕಲಾವಿದ ಸುದರ್ಶನ್ ಅವರ ಮೇಲೆ ಅಪರಿಚಿತ ಯುವಕನೊಬ್ಬ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಕೈಕುಲುಕುವಂತೆ ನಟಿಸಿದ ಆ ಯುವಕ, ಪಟ್ನಾಯಕ್ ಅವರ ವಾಚ್ ಕಿತ್ತುಕೊಳ್ಳಲು ಯತ್ನಿಸಿ ಅವರ ಕೈಗಳನ್ನು ತಿರುಚಿದ್ದಾನೆ. ಪಟ್ನಾಯಕ್ ಇದಕ್ಕೆ ಪ್ರತಿರೋಧಿಸಿದಕ್ಕೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಹಲ್ಲೆಗೊಳಗಾಗಿದ್ದ ಸುದರ್ಶನ್ ಪಟ್ನಾಯಕ್ ಅವರನ್ನು ನಂತರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಓಡಿಶಾದ ಕೋನಾರ್ಕ್ ದೇವಾಲಯದ ಸಮೀಪದಲ್ಲೇ ಸ್ಯಾಂಡ್ ಆರ್ಟ್ ಫೆಸ್ಟಿವಲ್ ನಡೆಯುತ್ತಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮರಳು ಶಿಲ್ಪಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ.

Facebook Comments

Sri Raghav

Admin